ಕೃಷಿ ಮತ್ತು ಯುವಜನತೆ :
ಕೃಷಿ ಮತ್ತು ಯುವಜನತೆ : ಭಾರತದಂತಹ ಬೃಹತ್ ರಾಷ್ಟ್ರಕ್ಕೆ ಆಹಾರ ಭದ್ರತೆಯ ಜೊತೆಗೆ ಕೋಟ್ಯಾಂತರ ಕೃಷಿಕರಿಗೆ ಜೀವನ ಭದ್ರತೆ ಕಲ್ಪಿಸುತ್ತಿರುವ ನಮ್ಮ ದೇಶದ ಆಧಾರ ಸ್ಥಂಭವೇ ಕೃಷಿ ಕ್ಷೇತ್ರ. ಇಂದು ವೈಜ್ಞಾನಿಕ ಆವಿಷ್ಕಾರಗಳು, ತಂತ್ರಜ್ಞಾನಗಳು ಕೃಷಿ ಕ್ಷೇತ್ರದ ಬೆಳವಣಿಗೆಯ ವೇಗವನ್ನು ದ್ವಿಗುಣಗೊಳಿಸಿದೆ. ವೈವಿಧ್ಯಮಯ ಬೆಳೆ ಪದ್ದತಿಗಳು, ಸುಧಾರಿತ ತಳಿಗಳು, ಯಾಂತ್ರಿಕರಣದಿಂದಾಗಿ ನಮ್ಮ ದೇಶದ ಕೃಷಿ ಕ್ಷೇತ್ರ ಪ್ರಗತಿಯನ್ನು ಕಾಣುತ್ತಿದೆ. ಜೊತೆಗೆ ಆಹಾರ ಕ್ಷೇತ್ರದಲ್ಲಿ ದೇಶ ಸ್ವಾವಲಂಬಿಯಾಗುವಂತೆ ಮಾಡಿದೆ. ಕೃಷಿ ಎಂದರೇ ಓದು ಬರಹ ತಿಳಿಯದ ಅನಕ್ಷರಸ್ಥರು, ಗ್ರಾಮೀಣ ಭಾಗಗಳಲ್ಲಿ ವಾಸಿಸುವ ಜನರು ಬದುಕು ಸಾಗಿಸಲು ಹುಡುಕುವ ಕಟ್ಟಕಡೆಯ ಆಯ್ಕೆ ಎಂದು ಬಿಂಬತವಾಗಿದ್ದ ಕ್ಷೇತ್ರ ಇಂದು ಯುವಜನತೆಯನ್ನು ತನ್ನೇಡೆಗೆ ಆಕರ್ಷಿಸುತ್ತಿದೆ . ಕೃಷಿ ಕ್ಷೇತ್ರಕ್ಕೆ ಅಕ್ಷರಸ್ಥ ಯುವಕರು ದಾಪುಗಾಲಿಡುತ್ತಿರುವುದು ಆಶಾದಾಯಕವಾಗಿದೆ. ಇಂದಿನ ಯುವಕರಲ್ಲಿ ಕೃಷಿಯ ಕುರಿತಾದ ಆಸಕ್ತಿ ಹೆಚ್ಚುತ್ತಿರುವುದನ್ನು ಗಮನಿಸಬಹುದಾಗಿದೆ. ವ್ಯವಸ್ಥಿತವಾದ ಕೃಷಿ ಹಾಗೂ ಮಾರುಕಟ್ಟೆ ನೈಪುಣ್ಯತೆಯ ಜೊತಗೆ ಯುವಸಮೂಹ ಕೃಷಿ ಕ್ಷೇತ್ರ ಪ್ರವೇಶಿಸುತ್ತಿರುವುದು ಕೃಷಿ ಕ್ಷೇತ್ರವನ್ನು ಮತ್ತಷ್ಟು ಆಶಾದಾಯಕ ದೃಷ್ಠಿಯಿಂದ ನೋಡುವಂತೆ ಮಾಡಿದೆ. ಕರೋನಾ ನಂತರದ ದಿನಗ...