ಪೋಸ್ಟ್‌ಗಳು

ಏಪ್ರಿಲ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನಾವುಗಳೇಲ್ಲ ಹೀಗೋ ಇದ್ವೀ ಅಲ್ವ!

ಇಮೇಜ್
  ನಾವುಗಳೇಲ್ಲ ಹೀಗೋ ಇದ್ವೀ ಅಲ್ವ! ಸುಮಾರು 80 ದಶಕದಲ್ಲಿ ಹುಟ್ಟಿರುವ ಈಗ ಬದುಕಿನ ನಾಲ್ಲನೇ ದಶಕದಲ್ಲಿ ಜೀವನ ಸವೆಸುತ್ತಿರುವ ನಮಗೆ ಬುಧುವಾರದ “ಚಿತ್ರಹಾರ್” , ಶುಕ್ರವಾರದ “ಚಿತ್ರ ಮಂಜರಿ” ಬಹುದೊಡ್ಡ ಮನೋರಂಜನೆಯಾಗಿತ್ತು. ಹಿಂದಿ ಭಾಷೆ ಅರ್ಥವಾಗದೇ ಇದ್ದರೂ ಚಿತ್ರಹಾರ್ ತಪ್ಪದೇ ನೋಡುತ್ತಿದ್ವಿ. ಊರಿನ ಕೆಲವೇ ಮನೆಗಳಲ್ಲಿ ಟಿ ವಿ ಇತ್ತು ಅದರಲ್ಲಿ ನಮ್ಮ ಮನೆಯೋ ಒಂದು. ಕ್ರೋನ್ ಹೆಸರಿನ ಸುಮಾರು 1.1/2 ಅಡಿ ಅಗಲ , 3.1/2 ಉದ್ದ , 2 ಅಡಿ ಎತ್ತರದ ಬೃಹಾದಕಾರದ ಪುಟ್ಟ ಸ್ಕೀನ್ ಇರುವ ಅದಕ್ಕೆ ರಕ್ಷಣೆಗೆಂದು ರೂಲಿಂಗ್ ಗೇಟ್ ಮಾದರಿಯ ಬಾಗಿಲಿದ್ದ ಟಿ.ವಿ ನಮ್ಮ ಮನೆಯಲ್ಲಿತ್ತು. ಅದಕ್ಕೆ ಮುಗಿಲೆತ್ತರದ ಆಟೆನಾ ಇತ್ತು ಅದಕ್ಕೆ ಬೋಸ್ಟರ್ ಹೆಸರಿನ ಒಂದು ಉಪಕರಣ ಅದರಲ್ಲಿರುವ ಹಸಿರು ಲೈಟ್ ಆನ್ ಆಗುವ ವರೆವಿಗೂ ಆಟೆನಾ ತಿರುಗಿಸುತ್ತಾ ಟಿವಿ ನೋಡುತ್ತಿದ್ವಿ . ಆ ಟಿವಿ ನಾಗರಾಜು ದೊಡ್ಡಪ್ಪ ನಮ್ಮ ಮನೆಗೆ ತಂದಿದ್ದು ಅಂತ ನೆನಪು. ರಾಮಾಯಣ ಮಹಾಭಾರತಗಳನ್ನು ನಾವು ಅರ್ಥೈಯಿಸಿಕೊಂಡಿದ್ದು ಇದೇ ಟಿವಿ ಯಲ್ಲಿ. ಮನೆ ತುಂಬ ಊರಿನ ಎಲ್ಲಾ ಜನರು ಕೂತು ರಾಮಯಣ ಮಹಾಭಾರತ ನೋಡ್ತಾ ಇದ್ದರು, ಅದು ಹಿಂದಿಯಲ್ಲಿ ಬರ್ತಾ ಇತ್ತು. ಅಲ್ಲಿ ಕುಳಿತಿರುವ ಯಾರಿಗೂ ಹಿಂದಿ ಬರ್ತಾ ಇರಲಿಲ್ಲಿ ಆದರೂ ಎಲ್ಲರೂ ತದೇಕ ಚಿತ್ತದಿಂದ ಟಿವಿ ನೋಡ್ತಾ ಇದ್ದರು. ಭಾನುವಾರದ ದಿನ ಸುರಭಿ ಅಂತ ಒಂದೇ ಒಂದು ಧಾರಾವಾಹಿ ಬರ್ತಾ ಇತ್ತು. ಬಿ.ಆರ್ ಛಾಯ ರವರ ದ್ವನಿಯಲ್ಲಿ “ಹೂವು ...

“ಕುಪ್ಪಳ್ಳಿ ಪುಟ್ಟಪ್ಪ ಪೂರ್ಣ ಚಂದ್ರ ತೇಜಸ್ವಿ “

  “ಕುಪ್ಪಳ್ಳಿ ಪುಟ್ಟಪ್ಪ ಪೂರ್ಣ ಚಂದ್ರ ತೇಜಸ್ವಿ “ ಪ್ರಾಣಿ, ಪಕ್ಷಿ, ಮಲೆನಾಡು, ಕಾಫಿತೋಟ, ಒಟ್ಟಾರೆ ಕಾಡನ್ನುಇವರಷ್ಟು ಪ್ರೀತಿಸಿದವರು ಯಾರು ಇಲ್ಲ. ಸಣ್ಣ ಸಣ್ಣ ವಿಷಯಗಳಲ್ಲೂ   ಅದ್ಬುತಗಳನ್ನು ಕಂಡುಕೊಂಡು ಅದನ್ನು ಸಾಹಿತ್ಯದ ಮೂಲಕ ಜನಮಾನಸಕ್ಕೆ ಇಳಿಸಿದ ಅಪರೂಪದ ಸಾಹಿತಿ   ನೀವು.   ಬದುಕಿದ್ದರೇ ನಿಮಗೆ 87 ನೇ ವರ್ಷ ಇರುತ್ತಿತ್ತು , ಆದರೆ   ನೀವು ನಮ್ಮನ್ನು ಅಗಲಿ ಇಂದಿಗೆ 17 ವರ್ಷಗಳು ಕಳೆದು ಹೋಗಿದೆ (8-09-1938 ರಿಂದ 5-4-2007) . ಕನ್ನಡ   ಭಾಷೆಯ ಮತ್ತು ಕನ್ನಡಿಗರ   ಮೇಲೆ ನೀವು ತೋರಿದ ಪ್ರೀತಿ ಅಮ್ಮನಂತಹದು ಸರ್‌.   ಕಥೆಗಾರ , ಕಾದಂಬರಿಕಾರ, ಹೋರಾಟಗಾರರಾಗಿ ಇದ್ದ ನೀವು ಎಲ್ಲಾ ಪಾತ್ರಗಳಿಗೂ ನ್ಯಾಯ ಒದಗಿಸಿದ್ದೀರಿ. ನಿಮ್ಮನ್ನು   ನಿಮ್ಮ ಸಾಹಿತ್ಯ ಜಗತ್ತಿನಿಂದಲೇ ಕಂಡವನ್ನು ನಾನು. ಚಿಕ್ಕ ಮಂಗಳೂರು ಕಾಫೀ ತೋಟಗಳನ್ನು ನೋಡಿದಾಗ ನಿಮ್ಮ ನೆನೆಪು ಕಾಡದೇ ಇರದು . ಜೇನು ನೋಣಗಳನ್ನು ಕಂಡಾಗ ಅದರ ಸಿಹಿಗಿಂತ ನಿಮ್ಮ ಕಾರ್ವಾಲೋ ಕಾದಂಬರಿಯ ಸನ್ನಿವೇಶ ಒಮ್ಮೆ ಬಂದು ಹೋಗದೇ ಇರದು.   ಅಷ್ಟು ಅದ್ಬುತವಾದ ಬರಹ ನಿಮ್ಮದು .   ಹೊಸ ವಿಚಾರಗಳು ಎಂಬ ಪುಸ್ತಕದ ಎಲ್ಲಾ ಬರಹಗಳೂ ಸಹ ಇಂದಿಗೂ ಪ್ರಸ್ತುತವೆನಿಸುತ್ತಿವೆ ಅಂತಹ ದೂರದೃಷ್ಠಿ ಇರುವ ಸಾಹಿತಿಗಳು ನೀವು.   ನೀವು ಭೌತಿಕವಾಗಿ ನಮ್ಮೊಂದಿಗಿಲ್ಲದೇ ಇರಬಹುದು ಆದರೇ ನಿಮ್ಮ ಬರಹಗಳಿಂದ ಕೋಟ್ಯಾಂತರ ಮನಸ್ಸುಗಳ...

ಅನೀಶ್ ನಿನ್ನಂತಹವರೇ ನಮ್ಮ ಕನ್ನಡ ಮತ್ತು ಕರ್ನಾಟಕದ ನಿಜವಾದ ಆಸ್ತಿ . . . . .

 ಕಳೆದ ಶುಕ್ರವಾರ ಮೈಸೂರಿಗೆ ಹೊರಡಲು ಸಿದ್ದನಿರುವಾಗ ಗೆಳೆಯ ಲೋಕೇಶ್ Rapido ಬಳಕೆ ಮಾಡು ಬೇಗ ಮೈಸೂರು ಸ್ಯಾಟಿಲೈಟ್ ಬಸ್ ಸ್ಟಾಪ್ ತಲುಪುತ್ತಿಯಾ ಎಂದು ಸಲಹೆ ನೀಡಿದ . ಕೂಡಲೇ ಮೊಬೈಲ್ ನಲ್ಲಿ Rapido ಬುಕ್ ಮಾಡಿದೆ, ಕೆಲವೇ ನಿಮಿಷದಲ್ಲಿ  ಇಲ್ಲೆ ನಿಮ್ಮ ಮುಂದೆ ಕಾಣಿಸುತ್ತಾ ಇದೀನಾ ಹಾ ನಾನೇ ಎಂದು ಜೋರಾಗಿ ಕೂಗಿದ.               ನೋಡಿದ ಕೂಡಲೇ ಗೊತ್ತಾಗಿದ್ದು ಆತ ಕರ್ನಾಟಕದವನಲ್ಲ , ಉತ್ತರ ಭಾರತದವನಂತೆ ಕಾಣಿಸಿದ . ಕನ್ನಡಿಗರೇ ನಾಚುವಂತೆ ಕನ್ನಡದಲ್ಲಿ ಮಾತನಾಡಿದ. ಸ್ಕೂಟರ್ ತುಂಬ ಹಳೆಯದಾಗಿತ್ತು ಮತ್ತೋಮ್ಮೆ ಸ್ಕೂಟರ್ ನಂಬರ್‌ ಕನ್ವರ್ಮ್‌ ಮಾಡಿಕೊಂಡು ಒಟಿಪಿ ಹೇಳಿದೆ ಕೂಡಲೇ ಆತ ಧನ್ಯವಾದಗಳು ಸರ್‌ ಹೆಲ್ಮಟ್ ಹಾಕಿಕೊಳ್ಳಿ ಸರ್‌ ಎಂದು ಹೇಳಿದ  ನಮ್ಮ ಸವಾರಿ ಪ್ರಾರಂಭವಾಯಿತು. ಹಾಗೆ ಆತನನ್ನು ಮಾತಿಗೆಳೆದು ನಿಮ್ಮ ಹೆಸರು ಏನು ಎಂದು ಕೇಳಿದೆ ಸರ್‌ ಅನೀಶ್‌ ನಾನು ಯುಪಿ ಯವನು ಸರ್‌ ಇಲ್ಲೆ ಮಾನ್ಯತಾ ಟೆಕ್‌ ಪಾರ್ಕ್‌ ನಲ್ಲಿ ಸೆಕ್ಯೂರಿಟಿ ಕೆಲಸ ಮಾಡ್ತಾ ಇದೀನಿ ಸಹಕಾರ ನಗರದಲ್ಲಿ ರೂಂ ಮಾಡಿಕೊಂಡಿದ್ದೀನಿ ಸರ್‌ ಎಂದು ತನ್ನ ಸಂಕ್ಷಿಪ್ತ ಪರಿಚಯ  ಮಾಡಿಕೊಂಡ               ನೀವು ಯುಪಿ ಇಂದ ಏಕೆ ಇಲ್ಲಿ ಬಂದು ಕೆಲಸ ಮಾಡ್ತಾ ಇದ್ದೀರಿ ಎಂದು ಮರು ಪ್ರಶ್ನೆ ಕೇಳಿದೆ…. ಸರ್ ಯುಪಿ ಯಲ್ಲಿ ಕೆಲಸ ಸಿಗೋದಿಲ್ಲ ಸರ್‌ ಹೀಗಾಗಿ ...

ಯುಗಾದಿ ಬಂತೆಂದರೇ “ತಾತ” ನ ನೆನಪು ಕಾಡುತ್ತದೆ.

 ಯುಗಾದಿ ಬಂತೆಂದರೇ “ತಾತ” ನ ನೆನಪು ಕಾಡುತ್ತದೆ.          ನನ್ನ ತಾತ ಅಳಗಂಚಿ ಶಾನಭೋಗರಾಗಿದ್ದರು ತಗಡೂರು ಅವರ ಕರ್ಮಭೂಮಿ , ನನ್ನನ್ನೂ ಕಂಡರೆ ಉಳಿದ ಮೊಮ್ಮಕ್ಕಳಿಗಿಂತ ತುಸು ಹೆಚ್ಚೇ ಪ್ರೀತಿ ಇತ್ತು ಅದಕ್ಕೆ  ಮುಖ್ಯ ಕಾರಣ ಉಳಿದ ಎಲ್ಲಾ ಮೊಮಕ್ಕಳಿಗಿಂತ ತಾತನೋಂದಿಗೆ ಹೆಚ್ಚು ಕಾಲ ಕಳೆದದ್ದು ನಾನೇ ಹೀಗಾಗಿ ಸ್ವಲ್ಪ ಹೆಚ್ಚೇ ಪ್ರೀತಿ ಇತ್ತು ಜೊತೆಗೆ ಹೆಚ್ಚು ಏಟುಗಳನ್ನು ತಿಂದವನು ಕೂಡ ನಾನೇ. ತಾತ ನನ್ನನ್ನೂ ಸ್ಕೂಲಿಗೆ ಹೊಡೆದು ಕರೆದುಕೊಂಡು ಹೋಗ್ತಾ ಇದ್ದದ್ದು ಈಗಲೂ ನನಗೆ ನೆನಪಿದೆ.   ಯುಗಾದಿ ಬಂತೆದರೆ ತಾತಾ ನೆನಪಾಗುತ್ತಾರೆ. ಯುಗಾದಿಗೆ ಒಂದು ವಾರದ ಮುಂಚೆ ಕೆಂಪನನ್ನು ಕರೆದು ಕಟಿಂಗ್ ಮಾಡಿಸ್ತಾ ಇದ್ದರು . ಬಾಲು ಅಂಗಡಿಗೆ ಕರೆದುಕೊಂಡು ಹೋಗಿ ಹೊಸ ಬಟ್ಟೆ ಹೊಲಿಸ್ತಾಇದ್ದರು. ಒಂದು ಸಾರಿ ಬಾಲು ಯುಗಾದಿಗೆ ಬಟ್ಟೆ ಹೊಲಿದುಕೊಡಲಿಲ್ಲದ ಕಾರಣ ಯುಗಾದಿ ದಿನ ಪೂರ್ತಿ ನಾನು ಬಾಲು ಅಂಗಡಿಯಲ್ಲಿ ಕೂತು ಬಟ್ಟೆ ಹೊಲಿಸಿಕೊಂಡು ಸಂಜೆ ಮನೆಗೆ ಬಂದಿದ್ದೆ. ತಾತಾನ ನಿರ್ದೇಶನದಂತೆ ಅಪ್ಪ ಕೂಡ ಯುಗಾದಿಗೆ ನನಗೆ ತಪ್ಪದೆ ಹೊಸ ಬಟ್ಟೆ ಹೊಲಿಸ್ತಾ ಇದ್ದರು. ತಾತಾ ಯುಗಾದಿಯನ್ನು ಗಂಡು ಮಕ್ಕಳ ಹಬ್ಬ ಎಂದು ಹೇಳಿತ್ತಿದ್ದರು “ ಪದ್ಮ ರಾಮುಗೆ ಎಣ್ಣೆ ನೀರು ಹಾಕಿ ಹೊಸ ಬಟ್ಟೆ ಹಾಕು” ಎಂದು ಯುಗಾದಿಯ ಬೆಳಗ್ಗೆ ತಾತಾ ನಿರ್ದೇಶನ ಹೊರಡಿಸುತ್ತಿದ್ದರು. ಯುಗಾದಿಯ ದಿನ ತಾತ ತುಂಬ ನೆನಪಾಗುತ್ತಾರೆ. ತಾತನ ನ...

ಅಪ್ಪನಿಗೀಗಾ 78 . . . . .

 ಅಪ್ಪನಿಗೀಗಾ 78 . . . . . ಅಪ್ಪ ನಿಮಗೆ ಈಗ 78 ವರ್ಷ (3-4-2025)  ನಾನು ಕಂಡಂತೆ  ನೀವು ವಿಶ್ರಾಂತಿ ಅಂತ ಪಡೆದದ್ದು ನೆನಪಿಲ್ಲ. ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿ 20 ವರ್ಷ ಗಳು ಕಳೆದಿದೆ .  ನಿಮ್ಮ ನಿವೃತ್ತಿಯ ನಂತರ ನಾವೇಲ್ಲರು ಮೈಸೂರಿಗೆ ಬಂದು ನೆಲೆಸಬೇಕಾಗಿ ಬಂತು, ತಗಡೂರಿನಲ್ಲಿ ಶಿಕ್ಷಕ ವೃತ್ತಿಯ ಜೊತೆಗೆ ಅಂಗಡಿ ವ್ಯಾಪಾರ ಮಾಡುತ್ತ ನಮ್ಮೇಲ್ಲರ ಬದುಕನ್ನು ಕಟ್ಟಿದ್ದೀರಿ , ವೃತ್ತಿಯಲ್ಲಿರುವಾಗಲೇ ಅಕ್ಕನ ಮದುವೆ ಮಾಡಿದ್ದೀರಿ ಅವಳಿಗೀಗಾ 18 ವರ್ಷದ ಮಗಳಿದ್ದಾಳೆ. ನಿವೃತ್ತಿಯ ನಂತರ ಮೈಸೂರಿಗೆ ಬಂದು ಬ್ರಾಹ್ಮಣ ಧರ್ಮ ಸಹಾಯ ಸಭಾ ದಲ್ಲಿ ಕೆಲಸಕ್ಕೆ ಸೇರಿ . ಸುದೀರ್ಘ 18 ವರ್ಷ ಗಳು ಅಲ್ಲಿ ಸೇವೆ ಸಲ್ಲಿಸಿ, ನಂತರ ಅಲ್ಲಿಂದ ನಿವೃತ್ತರಾಗಿದ್ದೀರಿ. ತಗಡೂರಿನ ತಾತನ ಸೂರಿಗೆ ಆರ್ ಸಿ ಸಿ ಹಾಕಿಸಿ ತಗಡೂರಿನ ನಂಟು ಉಳಿಯುವಂತೆ ಮಾಡಿಕೊಟ್ಟಿದ್ದೀರಿ.  ನೀವು ಬದುಕಿನಲ್ಲಿ ಅನುಭವಿಸಿ ಕಷ್ಟ ಕಾರ್ಪಣ್ಯಗಳನ್ನು ಹತ್ತಿರದಿಂದ ನಾನು ನೋಡಿದ್ದೇನೆ.  ಆ ಎಲ್ಲಾ ಕಷ್ಟಗಳನ್ನು ನೀವು ನಿಭಾಯಿಸಿದ್ದು “ದುಡಿಮೆ” ಎಂಬ ಮಂತ್ರದಿಂದ ಎಂಬುದನ್ನು ನಾನು ಅರಿತಿದ್ದೇನೆ.     ಹೆಂಡತಿ, ಮಗ, ಮಗಳು ಅಳಿಯ,  ಸೊಸೆ,  ಮುದ್ದಾದ 3 ಮೊಮ್ಮಕ್ಕಳೋಂದಿಗೆ  78  ವಸಂತಗಳ ಪರಿಪೂರ್ಣ ಬದುಕು ನಿಮ್ಮದು. ಚಿನ್ನಮ್ಮ ನ ಮಗನಾದ ಕಾರಣ ನಿಮ್ಮನ್ನು “ಚಿನ್ನಮರಿ” ಎಂದು ಎಲ್ಲರೂ ಕರೆಯುತ್ತಾರ...