*ಸರ್ಕಾರದ ಜಾಲತಾಣಗಳು ನಾಗರೀಕರ ಮನೆ ಮನ ತಲುಪಲಿ.*
*ಸರ್ಕಾರದ ಜಾಲತಾಣಗಳು ನಾಗರೀಕರ ಮನೆ ಮನ ತಲುಪಲಿ.* ಸರ್ಕಾರಗಳು ಯೋಜನೆಗಳನ್ನು ರೂಪಿಸುವುದು ನಾಗರೀಕ ಸಮಾಜದ ಆಶೋತ್ತರಗಳನ್ನು ಈಡೇರಿಸುವ ಕಾರಣಕ್ಕೆ, ಅದರಲ್ಲೂ ಇ-ಆಡಳಿತದ ಯೋಜನೆಗಳೇಂದರೇ ಅದು ಆಡಳಿತದಲ್ಲಿ ವೇಗ, ಪಾರದರ್ಶಕತೆ ಮತ್ತು ಸರಳೀಕರಣ ಅದರ ಮೂಲ ಉದ್ದೇಶವಾಗಿರುತ್ತದೆ. ಇತ್ತೀಚೀನ ದಿನಗಳಲ್ಲಿ ಇ-ಆಡಳಿತದ ಯೋಜನೆಗಳ ಅನುಷ್ಠಾನ ಸಮರೋಪಾದಿಯಲ್ಲಿ ಸಾಗಿದೆ ಎಂದರೇ ಅತಿಶಯೋಕ್ತಿಯಾಗಲಾರದು. ಆದಾಗ್ಯೂ ಕೆಲವು ವಿಷಯಗಳ ಬಗ್ಗೆ ಗಂಭಿರವಾಗಿ ಚರ್ಚಿಸಬೇಕಾಗಿದೆ. ಯೂಟ್ಯೂಬ್, ವಾಟ್ಸ್‌ಪ್, ಪೇಸ್ ಬುಕ್, ಟ್ವಿಟರ್ ಇತ್ಯಾದಿಗಳು ಸಮಾಜವನ್ನು ತಲುಪಲು ಸಾಧ್ಯವಾದಂತೆ ನಮ್ಮ ಇ-ಆಡಳಿತದ ಯೋಜನೆಗಳು ನಾಗರೀಕ ಸಮಾಜವನ್ನು ತಲುಪುತ್ತಿಲ್ಲ. ಇದಕ್ಕೆ ಕೌಶಲ್ಯದ ಕೊರತೆ ಅಥವಾ ಸೌಕರ್ಯದ ಕೊರತೆ ಎಂಬ ಕಾರಣವನ್ನು ನೀಡಬಹುದು. ಆದರೆ ಅದನ್ನು ಪೂರ್ಣಪ್ರಮಾಣದಲ್ಲಿ ಒಪ್ಪಲು ಸಾಧ್ಯವಿಲ್ಲ. ಟೆಲಿಗ್ರಾಂ ವ್ಯವಸ್ಥೆಯನ್ನು ನಿಲ್ಲಿಸಲಾಗಿದೆ, ಪತ್ರ ವ್ಯವಹಾರಗಳು ಶೇಕಡ 90 ರಷ್ಟು ಕಡಿಮೆಯಾಗಿದೆ. ಇದಕ್ಕೆ ಮುಖ್ಯ ಕಾರಣ ಹಳ್ಳಿ - ನಗರ ಎಂಬ ಚೌಕಟ್ಟಿಲ್ಲದೆ ಮಾಹಿತಿ ತಂತ್ರಜ್ಞಾನ ದೇಶದ ಮೂಲೆ ಮೂಲೆಗೂ ವ್ಯಾಪಿಸುತ್ತಿದೆ. ಸರ್ಕಾರವು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಇ-ಆಡಳಿತ) ಅಡಿಯಲ್ಲಿರುವ ...