ಅಗ್ನಿ ಪಥ್ : ನನಗನಿಸಿದ್ದು
ಅಗ್ನಿಪಥ್
ಸಧ್ಯ ನಮಗೆ - ನಿಮಗೆ ಯಾವ ಉದ್ಯೋಗ ಭದ್ರತೆ ಇದೆ ಹೇಳಿ. ನನ್ನನ್ನೇ ಉದಾಹರಣೆಯಾಗಿ ಮಾತನಾಡುತ್ತಿದ್ದೇನೆ. ಸಧ್ಯ 37 ವರ್ಷದ ನಾನು ಈಗ ಮಾಡುತ್ತಿರುವ ಕೆಲಸದಿಂದ ಹೊರ ಬಂದರೆ ನಾನು ಯಾವ ಕೆಲಸ ಮಾಡಲು ಸಾಧ್ಯ. ದೈಹಿಕವಾಗಿ, ಮಾನಸಿಕವಾಗಿ ಬಳಲಿದ್ದೇನೆ. ಈ ಸಂದರ್ಭದಲ್ಲಿ ನಾವು ಪ್ರತಿ ತಿಂಗಳು ಉಳಿತಾಯ ಮಾಡಿದ PF ನಿಂದ ಮುಂದಿನ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆಯೇ?
ದುಡಿಯಲು ತೋಳಿನಲ್ಲಿ ಬಲವಿಲ್ಲ ಇಷ್ಟು ವರ್ಷ ಕೂಡಿಟ್ಟ ಹಣ ಮುಂದಿನ ಮುರ್ನಾಕು ವರ್ಷದಲ್ಲಿ ಮುಗಿದು ಹೋಗಬಹುದು ಅಲ್ಲವೇ ? ನಮ್ಮೇಲ್ಲರ ಪರಿಸ್ಥಿತಿ ಯಾವ ಕ್ಷಣದಲ್ಲಾದರೂ ಮಾಲೀಕನ ಆಜ್ಞೆಯಂತೆ ಕೆಲಸದಿಂದ ಹೊರ ನಡೆಯಬೇಕಾದ ಸಾಧ್ಯತೆಗಳೇ ಹೆಚ್ಚಾಗಿದೆ. ಇಂತಹ ಅನಿಶ್ಚಿತತೆಯಲ್ಲಿ ನಾವೇಲ್ಲರು ಇದ್ದೇವೆ.
17.5 ವರ್ಷಕ್ಕೆ ಕೆಲಸಕ್ಕೆ ಸೇರಿ ಮುಂದಿನ ನಾಲ್ಕು ವರ್ಷ ಕೆಲಸ ಕೊಟ್ಟು ನಿವೃತ್ತಿಯನ್ನು ನಿಶ್ಚಯವಾಗಿ ತಿಳಿಸಿ, ತೋಳಲ್ಲಿ ಬಲವಿರುವಾಗಲೇ 10-12 ಲಕ್ಷಗಳನ್ನು ಕೈಗೆ ಕೊಟ್ಟು, ನಿವೃತ್ತಿಯ ನಂತರ ಹಲವಾರು ಕ್ಷೇತ್ರಗಳಲ್ಲಿ ವಿಶೇಷ ಆಧ್ಯತೆಗಳನ್ನು ನೀಡಿ, ಮುಂದಿನ ಬದುಕಿನ ದಾರಿಯನ್ನು ರೂಪಿಸಿಕೊಳ್ಳಿ ಎಂದು ಹೇಳುವುದರಲ್ಲಿ ತಪ್ಪೇನಿದೆ.?
21 ನೇ ವರ್ಷಕ್ಕೆ ನಿವೃತ್ತನಾಗುವ ಆ ಯುವಕನ ಕಣ್ಣಗೆ ಜಗತ್ತಿನ ತುಂಬ ಅವಕಾಶಗಳ ಮಹಾ ಪೂರವೇ ಕಾಣುತ್ತದೆ. 40-45 ಕ್ಕೂ ನಿವೃತ್ತನಾಗುವ/ ಕೆಲಸದಿಂದ ವಜಾಗೊಳ್ಳುವ/ ಅಥವಾ ಕಂಪನಿಯ ನಷ್ಟಕ್ಕೆ ಗುರಿಯಾಗುವವರಿಗೆ ಬ್ಯಾಂಕಿನ ವಾರ್ಷಿಕ ಬಡ್ಡಿ ಇಳಿಕೆಯಾಗದಿರಲಿ ಎಂಬ ಆತಂಕದ ಹೊರತಾಗಿ ಯಾವ ಆಶಾಕಿರಣವು ಕಾಣುವುದಿಲ್ಲ.
ಹೀಗಿರುವಾಗ ಅಗ್ನಿಪಥ್ ಯೋಜನೆ ನಗರ/ಗ್ರಾಮೀಣ ಭಾಗದಲ್ಲಿ ಬಡ ಮತ್ತು ಮಧ್ಯಮ ವರ್ಗದ ಉದ್ಯೋಗವಿಲ್ಲದ ಲಕ್ಷಾಂತರ ಯುವಕರ ಪಾಲಿಗೆ ಒಂದು ಸದಾವಕಾಶವೇ ಸರಿ. ಯುವಕರು ಸೈನ್ಯ ಸೇರಲಿ ಆ ಮೂಲಕ ಮುಂದಿನ 4 ವರ್ಷಗಳಲ್ಲಿ ಮನೆಗೆ ಮತ್ತು ಸಮಾಜಕ್ಕೆ ಬಲಿಷ್ಠನಾದ ಸದೃಢ ಮನಸ್ಥಿತಿಯ ಯೋಗ್ಯ ನಾಗರೀಕ ಮತ್ತು ಆರ್ಥಿಕವಾಗಿಯೂ ಸಶಕ್ತನಾದ ಒಬ್ಬ ನಾಗರೀಕ ಈ ಸಮಾಜಕ್ಕೆ ಸಿಗುತ್ತಾನೆ.
ಇಂದಿನ ಯುವಕರು ಸಮಾವೇಶ/ಚುನಾವಣಾ ಪ್ರಚಾರ/ ಗಲಭೆ/ರಾಜಕೀಯ ಹಿತಾಸಕ್ತಿಗಳಿಗೆ ಬಳಸಲ್ಪಡುತ್ತಿದ್ದಾರೆ. ಅಗ್ನಿಪಥ್ ಯೋಜನೆ ಇಂತಹ ಸಾವಿರಾರು ಯುವಕರ ಬಾಳಿಗೆ ಬೆಳಕಾಗುತ್ತದೆ.
ಮುಂದಿನ 10 ವರ್ಷಗಳಲ್ಲಿ ದೇಶದ ಪ್ರತಿ ಹಳ್ಳಿ ಹಳ್ಳಿಗಳಲ್ಲೂ ನುರಿತ ಯೋಧರು ಸಿಗುತ್ತಾರೆ. ಪ್ರಮುಖವಾಗಿ ಬಾಹ್ಯ ಹಾಗೂ ಆಂತರಿಕ ಭಯೋತ್ಪದಕರ ಉತ್ಪಾದನೆಗೆ ಕಡಿವಾಣ ಹಾಕಿದಂತಾಗುತ್ತದೆ.
ಅಗ್ನಿಪಥ್ ಯೋಜನೆ ದೇಶದ ಹಲವು ಸಮಸ್ಯೆಗಳ ನಿವಾರಣೆಯಲ್ಲಿ ಮಹತ್ವದ ಪಾತ್ರವಹಿಸುವ ಸಾಧ್ಯತೆಯನ್ನು ಅಲ್ಲೆಗಳೆಯುವಂತಿಲ್ಲ.
ಬೆಂಕಿ ಬೆಂಕಿ
ಪ್ರತ್ಯುತ್ತರಅಳಿಸಿತುಂಬಾ ಉಪಯುಕ್ತ ಅನಿಸಿಕೆ.
ಪ್ರತ್ಯುತ್ತರಅಳಿಸಿನಾಟಿತು ರಾಮು
ಪ್ರತ್ಯುತ್ತರಅಳಿಸಿYes Right concept
ಪ್ರತ್ಯುತ್ತರಅಳಿಸಿಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿPractical prospect
ಪ್ರತ್ಯುತ್ತರಅಳಿಸಿನಿಮ್ಮ ಮಾತು ನಿಜ, ವಾಸ್ತವ ತಿಳಿಯಿತು
ಪ್ರತ್ಯುತ್ತರಅಳಿಸಿIts an opportunity to our youngsters at early age earning & disciplined life with good returns after four years.
ಪ್ರತ್ಯುತ್ತರಅಳಿಸಿVery good move from government Of INDIA👏
ಪ್ರತ್ಯುತ್ತರಅಳಿಸಿಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿReally good one
ಪ್ರತ್ಯುತ್ತರಅಳಿಸಿNice.....
ಪ್ರತ್ಯುತ್ತರಅಳಿಸಿ