ಪಠ್ಯ ಪರಿಷ್ಕರಣೆ : ಒಂದು ದೃಷ್ಠಿಕೋನ
ಪಠ್ಯ ಪರಿಷ್ಕರಣೆ : ಒಂದು ದೃಷ್ಠಿಕೋನ
ಕಳೆದ ಎರಡು ತಿಂಗಳಿನಿಂದ ರಾಜ್ಯದಲ್ಲಿ ಪಠ್ಯ ಪರಿಷ್ಕರಣೆ ಕುರಿತಾಗಿ ಎಡ – ಬಲಪಂತ ಗಳ ವಾದ ವಿವಾದಗಳು ನಡೆಯುತ್ತಲೆ ಇದೆ. ಸರ್ಕಾರ ಮತ್ತು ವಿರೋಧ ಪಕ್ಷಗಳು ದಿನಕ್ಕೂಂದು ಪ್ರಹಸನ ಮಾಡುತ್ತಲೇ ಇವೆ .
ನಮ್ಮ ಬುದ್ದಿ ಮಟ್ಟಕ್ಕೆ ತಕ್ಕಂತೆ ಅರ್ಥೈಸಿಕೊಂಡ ಸಿದ್ದಾಂತಗಳನ್ನು ಮಕ್ಕಳಲ್ಲಿ ತುಂಬುಲು ಪಠ್ಯಪುಸ್ತಕಗಳನ್ನು ರಚಿಸುವುದಾದರೆ ಮಕ್ಕಳಲ್ಲಿ ಸಿದ್ದಾಂತಗಳನ್ನು ಬಲವಂತವಾಗಿ ಹೇರಿದಂತಾಗುವುದಿಲ್ಲವೇ? ಒಂದು ವಿಷಯವನ್ನು ಸೈದಾಂತಿಕವಾಗಿ ನೋಡುವುಕ್ಕಿಂತ ತಾರ್ಕಿಕವಾಗಿ ಯೋಚಿಸುವ ಗುಣ ಮತ್ತು ಮೌಲ್ಯವನ್ನು ವಿದ್ಯಾರ್ಥಿಗಳಲ್ಲಿ ಬೆಳಸಬೇಕಾದ ಶಿಕ್ಷಣ ವ್ಯವಸ್ಥೆ ಇಂದು ಸಿದ್ದಾಂತಗಳ ಬಲವಂತ ಹೇರಿಕೆಗೆ ಪ್ರಯತ್ನಿಸುತ್ತಿರುವುದು ದುರಾದೃಷ್ಟಕರ.
ಈ ಹಿಂದಿನ ಪಠ್ಯಕ್ರಮದಲ್ಲಿದ್ದ ಎಡ ಪಂಥೀಯ ವಿಚಾರಧಾರೆಗಳ ಬದಲಿಗೆ ಈಗ ಬಲ ಪಂಥೀಯ ವಿಚಾರಧಾರೆಗಳನ್ನು ಸೇರಿಸಬೇಕು ಎಂಬ ವಿನಾಶದ ವಾದವನ್ನು ಯಾರು ಒಪ್ಪಬಾರದು.
ಕುವೆಂಪುರವರು ತಮ್ಮ ಸಾಹಿತ್ಯ ಕೃಷಿಯಲ್ಲಿ ವಿಶ್ವಮಾನವ ಸಂದೇಶ ಸಾರಿದರು ಆ ಮೂಲಕ ವಿಶ್ವಮಾನವರಾದರು ಆದರೆ ಇಂದು ಓಕ್ಕಲಿಗ ಸಮುದಾಯದ ಕವಿಯಾಗಿ ಬಾಸವಾಗುತ್ತಿದ್ದಾರೆ. ಬಸವಣ್ಣವನರು 12 ನೇ ಶತಮಾನದ ಸಮಾಜ ಸುಧಾರಕರಾಗಿ ಕಾಣಬೇಕಿತ್ತು ಆದರೆ ಇಂದು ವೀರಶೈವ ಜನಾಂಗಕ್ಕೆ ಮಾತ್ರ ಸೀಮೀತರಾಗುತ್ತಿದ್ದಾರೆ. ಇದಕ್ಕೆ ನಿಜಕ್ಕೂ ನಾಗರೀಕ ಸಮಾಜ ತಲೆತಗ್ಗಿಸಬೇಕು.
ಕುವೆಂಪು, ಬೇಂದ್ರೆ, ಬಸವಣ್ಣ, ಅಂಬೇಡ್ಕರ್, ರಂತಹ ಮಹನೀಯರ ಸಾಧನೆ ಮತ್ತು ಸಂದೇಶಗಳನ್ನು ಮಾತ್ರ ನಾವು ನೋಡಬೇಕು. ಅವರೆಲ್ಲರ ಜಾತಿ, ಮತ ಸಮುದಾಯದಿಂದ ಈ ಸಮಾಜಕ್ಕೆ ಆಗಬೇಕಾದ್ದು ಏನು ಇಲ್ಲ. ಇವರ ಸಾಧನೆ ಸಂದೇಶಗಳು ಪ್ರೇರಣೆ ಮತ್ತು ಸೂರ್ತಿಯಾಗಬೇಕು ಅಲ್ಲವೇ?
ಆದರೆ ಆಗುತ್ತಿರುವುದೇನು? ಬಲ ಪಂಥ ಮತ್ತು ಎಡ ಪಂಥ ಎಂಬ ಎರಡು ಪಂಥಗಳಲ್ಲಿ ಸಮಾಜಕ್ಕೆ ಆದರ್ಶವಾಗಬೇಕಾಗಿದ್ದ ಮಹನೀಯರನ್ನು ಕಟ್ಟಿಹಾಕಿದ್ದೇವೆ. ಈ ಎಲ್ಲಾ ಮಹನೀಯರ ಸಾಧನೆ ಮತ್ತು ಆದರ್ಶಗಳು ಜಾತಿ ಮತದ ಕೆಸರಲ್ಲಿ ಕೊಳೆಯಲಾರಂಭಿಸಿದೆ.
ಆದರ್ಶ ಗಳು ಮೈಗೂಡಬೇಕಾದ ವಿದ್ಯಾರ್ಥಿ ಬದುಕು ಇಂದು ಜಾತಿ ಮತದ ಪಂಥಗಳಲ್ಲಿ ಸೇರಿ ಮುಂದಿನ ಪೀಳಿಗೆಯನ್ನು ವಿನಾಶದ ಹಾದಿಗೆ ಕೊಂಡೊಯ್ಯುತಿದ್ದೇವೆ. ಇದು ನಿಲ್ಲಬೇಕು. ಹಿಂದಿನ ಸರ್ಕಾರಗಳು ಮಾಡಿದ ತಪ್ಪುಗಳಿಗೆ ಉತ್ತರವಾಗಿ ನಾವು ತಪ್ಪು ಮಾಡುತ್ತೇವೆ ಎಂಬುದು ಅನಾಗರೀಕತೆಯಾಗುತ್ತದೆ.
ಪಠ್ಯ ಪುಸ್ತಕಗಳಲ್ಲಿ ಸಮಾಜ ಸುಧಾರಣೆ, ಸಾಮಾಜಿಕ ನ್ಯಾಯ, ಪರಿಸರ ಪ್ರೇಮ, ಮಾನವೀಯ ಮೌಲ್ಯಗಳು ಸೇರಬೇಕು. ಆಮೂಲಕ ಸಮಾಜದಲ್ಲಿ ಶಾಂತಿಯ ಜೊತೆಗೆ ವಿಜ್ಞಾನ- ತಂತ್ರಜ್ಞಾನಗಳು ಬೆಳೆಯಬೇಕು. ಪಠ್ಯಗಳು ಹಳೆಯ ಭಕ್ತಿ ಶ್ರದ್ದೆಗಳ ಜೊತೆಗೆ ವರ್ತಮಾನದ ಆವಿಷ್ಕಾರಗಳನ್ನು ತಿಳಿಸಬೇಕು ಅಲ್ಲವೇ?
ಇಂದಿನ ಪಠ್ಯ ಪುಸ್ತಕಗಳಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಜೀವನದಲ್ಲಿ ಅನುಕೂಲವಾಗುವಂತಹ ವಿಷಯಗಳನ್ನು ತರಬೇಕು ಉದಾ: ಇ-ಆಡಳಿತದ ಕುರಿತಾದ ವಿಷಯಗಳು ಮತ್ತು ಅದರ ಬಳಕೆ ಕುರಿತಾಗಿ ತಿಳಿಸಬೇಕಿದೆ. ಏಳನೇ ತರಗತಿ ಪಾಸದ ವಿದ್ಯಾರ್ಥಿಗೆ ತಮ್ಮ ಜಾತಿ ಪ್ರಮಾಣ ಪತ್ರ ಪಡೆಯಲು ಮಧ್ಯವರ್ತಿಯನ್ನು ಆಶ್ರಯಿಸಬಾರದು ಅಲ್ಲವೇ.
ಇಂದಿಗೂ ಎಷ್ಟೋ ವಿದ್ಯಾರ್ಥಿಗಳಿಗೆ ಆನ್ ಲೈನ್ ನಲ್ಲಿ ಲಭ್ಯವಿರುವ ಸರ್ಕಾರದ ಸೌಕರ್ಯಗಳ ಬಗ್ಗೆ ಅರಿವಿಲ್ಲ. ಕಾರಣ ಶಾಲೆಗಳು ಎಂದು ಅದನ್ನು ತಿಳಿಸಲೇ ಇಲ್ಲ. ನಮ್ಮ ಕಾಲದಲ್ಲಿ ಪ್ರತಿ ವಾರ ನೈತಿಕ ಶಿಕ್ಷಣ ಎಂಬ ತರಗತಿ ಇರುತ್ತಿತ್ತು. ಈಗಲೂ ಇರಬಹುದೇನೋ ಇರಲಿ. ಜೊತೆಗೆ ಪ್ರತಿವಾರ ಇ-ಆಡಳಿತದ ಕುರಿತಾಗಿ ಎಲ್ಲಾ ಶಾಲೆಗಳಲ್ಲೂ ತರಗತಿಗಳು ನಡೆಯಬೇಕು. ಆ ಮೂಲಕ ಸರ್ಕಾರದ ಸೌಕರ್ಯಗಳನ್ನು ವಿದ್ಯಾರ್ಥಿಗಳು ಬಳಸುವಂತಾಗಬೇಕು.
ಶಿಕ್ಷಣ ಇಲಾಖೆ ಮತ್ತು ಇ-ಆಡಳಿತ ಕೇಂದ್ರದ ಸಾರ್ಮರ್ಥ್ಯ ಸಂಘಟನೆ ಯೋಜನಾ ಘಟಕ ಈ ಬಗ್ಗೆ ಸಮಗ್ರ ಯೋಜನಾ ವರದಿಯನ್ನು ತಯಾರಿಸಿ ಕಾರ್ಯಗತ ಗೊಳಿಸುವಂತಾಗಲಿ. ಶಿಕ್ಷಣ ಎಂಬುದು ಭೂತಕಾಲದ ಅನುಭವದ ಜೊತೆಗೆ ವರ್ತಮಾನವನ್ನು ಅರಿತು ಭವಿಷ್ಯವನ್ನು ಉಜ್ಷಲಗೊಳಿವಂತಹ ಕಾರ್ಯವನ್ನು ಮಾಡಬೇಕು ಅಲ್ಲವೇ .
ಜಾತಿ ಮತ ಪಂಥ ಗಳನ್ನು ಮಾತನಾಡುತ್ತ ನಮ್ಮ ಮಕ್ಕಳ ಮನಸ್ಸಿನಲ್ಲಿ ಸಹಬಾಳ್ವೆಯ ಬದುಕನ್ನು ಕಸಿದುಕೊಳ್ಳುತ್ತಿದ್ದೇವೆ. ಪಠ್ಯ ಪುಸ್ತಕಗಳು ಮುಂದಿನ ಜೀವನಕ್ಕೆ ಬೇಕಾದ ಎಲ್ಲಾ ಆದರ್ಶಗಳನ್ನು ನೀಡುವ ಜೊತೆಗೆ ವರ್ತಮಾನದ ಬದುಕನ್ನು ಸರಳಗೊಳಿಸಲಿ ಎಂಬುದೇ ನನ್ನ ಆಶಯ.
ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿನಿಮ್ಮ ಆಲೋಚನೆ ಅಭಿಪ್ರಾಯ ಸ್ವಾಗತಾರ್ಹ.... ಜ್ಞಾನ- ತಂತ್ರಜ್ಞಾನ ಹಾಗೂ ಭಕ್ತಿ ಶ್ರದ್ದೆಗಳ ಜೊತೆಗೆ ವರ್ತಮಾನದ ಆವಿಷ್ಕಾರಗಳನ್ನು ತಿಳಿಸಬೇಕು ಅಲ್ಲವೇ? ಈ ರೀತಿಯ ಆಲೋಚನೆಗಳು
ಪ್ರತ್ಯುತ್ತರಅಳಿಸಿಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಸದಸ್ಯರಲ್ಲಿ ಮುಂದಿನ ದಿನಗಳಲ್ಲಾದರೂ ಮೂಡಲಿ.