*ಸರ್ಕಾರದ ಜಾಲತಾಣಗಳು ನಾಗರೀಕರ ಮನೆ ಮನ ತಲುಪಲಿ.*
*ಸರ್ಕಾರದ ಜಾಲತಾಣಗಳು ನಾಗರೀಕರ ಮನೆ ಮನ ತಲುಪಲಿ.*
ಸರ್ಕಾರಗಳು ಯೋಜನೆಗಳನ್ನು ರೂಪಿಸುವುದು ನಾಗರೀಕ ಸಮಾಜದ ಆಶೋತ್ತರಗಳನ್ನು ಈಡೇರಿಸುವ ಕಾರಣಕ್ಕೆ, ಅದರಲ್ಲೂ ಇ-ಆಡಳಿತದ ಯೋಜನೆಗಳೇಂದರೇ ಅದು ಆಡಳಿತದಲ್ಲಿ ವೇಗ, ಪಾರದರ್ಶಕತೆ ಮತ್ತು ಸರಳೀಕರಣ ಅದರ ಮೂಲ ಉದ್ದೇಶವಾಗಿರುತ್ತದೆ. ಇತ್ತೀಚೀನ ದಿನಗಳಲ್ಲಿ ಇ-ಆಡಳಿತದ ಯೋಜನೆಗಳ ಅನುಷ್ಠಾನ ಸಮರೋಪಾದಿಯಲ್ಲಿ ಸಾಗಿದೆ ಎಂದರೇ ಅತಿಶಯೋಕ್ತಿಯಾಗಲಾರದು.
ಆದಾಗ್ಯೂ ಕೆಲವು ವಿಷಯಗಳ ಬಗ್ಗೆ ಗಂಭಿರವಾಗಿ ಚರ್ಚಿಸಬೇಕಾಗಿದೆ. ಯೂಟ್ಯೂಬ್, ವಾಟ್ಸ್‌ಪ್, ಪೇಸ್ ಬುಕ್, ಟ್ವಿಟರ್ ಇತ್ಯಾದಿಗಳು ಸಮಾಜವನ್ನು ತಲುಪಲು ಸಾಧ್ಯವಾದಂತೆ ನಮ್ಮ ಇ-ಆಡಳಿತದ ಯೋಜನೆಗಳು ನಾಗರೀಕ ಸಮಾಜವನ್ನು ತಲುಪುತ್ತಿಲ್ಲ. ಇದಕ್ಕೆ ಕೌಶಲ್ಯದ ಕೊರತೆ ಅಥವಾ ಸೌಕರ್ಯದ ಕೊರತೆ ಎಂಬ ಕಾರಣವನ್ನು ನೀಡಬಹುದು. ಆದರೆ ಅದನ್ನು ಪೂರ್ಣಪ್ರಮಾಣದಲ್ಲಿ ಒಪ್ಪಲು ಸಾಧ್ಯವಿಲ್ಲ.
ಟೆಲಿಗ್ರಾಂ ವ್ಯವಸ್ಥೆಯನ್ನು ನಿಲ್ಲಿಸಲಾಗಿದೆ, ಪತ್ರ ವ್ಯವಹಾರಗಳು ಶೇಕಡ 90 ರಷ್ಟು ಕಡಿಮೆಯಾಗಿದೆ. ಇದಕ್ಕೆ ಮುಖ್ಯ ಕಾರಣ ಹಳ್ಳಿ - ನಗರ ಎಂಬ ಚೌಕಟ್ಟಿಲ್ಲದೆ ಮಾಹಿತಿ ತಂತ್ರಜ್ಞಾನ ದೇಶದ ಮೂಲೆ ಮೂಲೆಗೂ ವ್ಯಾಪಿಸುತ್ತಿದೆ.
ಸರ್ಕಾರವು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಇ-ಆಡಳಿತ) ಅಡಿಯಲ್ಲಿರುವ ಇ-ಆಡಳಿತ ಕೇಂದ್ರದ ಮೂಲಕ *“ಕರ್ನಾಟಕ ಜಾಲತಾಣ ಯೋಜನೆ”* ಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಉದ್ದೇಶ ಸರ್ಕಾರದ ಎಲ್ಲಾ ಜಾಲತಾಣಗಳು ಏಕರೂಪತೆಯಿಂದ ಕೂಡಿರಬೇಕು, ಹಾಗೂ ಜಾಲತಾಣಗಳಿಗಾಗಿ ಇಲಾಖೆಗಳು ಮಾಡುವ ವೆಚ್ಚ ಕಡಿಮೆ ಮಾಡಬೇಕು. ಜೊತೆಗೆ ದೃಷ್ಠಿ ದಿವ್ಯಾಂಗರಿಗೂ ನೆರವಾಗುವ, ಅತ್ಯಂತ ಸುಲಭವಾಗಿ ನಾಗರೀಕರಿಗೆ ಮಾಹಿತಿ ಒದಗಿಸಬೇಕು ಎಂಬ ಹಲವಾರು ಉದ್ದೇಶಗಳನ್ನು ಹೊಂದಿದೆ.
ಆದರೆ ಇಲಾಖೆಗಳು ಜಾಲತಾಣ ಸೃಜನೆಯಲ್ಲಿ ತೋರಿದ ಆಸಕ್ತಿಯನ್ನು ಅದರ ಕುರಿತಾಗಿ ನಾಗರೀಕರಿಗೆ ತಿಳಿಸಲು ಆಸಕ್ತಿ ತೋರಿಸುತ್ತಿಲ್ಲ. ಸುಮಾರು 350 ಕ್ಕೂ ಹೆಚ್ಚು ಜಾಲತಾಣವನ್ನು ಇ-ಆಡಳಿತ ಕೇಂದ್ರ ಬೆಂಗಳೂರು ಕರ್ನಾಟಕ ಜಾಲತಾಣ ಯೋಜನೆಯ ಮೂಲಕ ಈಗಾಗಲೇ ಸೃಜಿಸಲಾಗಿದೆ. ಆದರೂ ಸಾಮಾನ್ಯವಾದ ಮಾಹಿತಿಗಳನ್ನು ಪಡೆಯಲು ನಾಗರೀಕರು ಕಚೇರಿಗೆ ಅಲೆದಾಡುತ್ತಿದ್ದಾರೆ. ಇಲಾಖೆಗೆ ಸಂಬಂಧಿಸಿದ ಮಾಹಿತಿಗಳು ಆಯಾ ಇಲಾಖೆಯ ಜಾಲತಾಣದಲ್ಲಿ ಲಭ್ಯವಿದ್ದರು ಮಾಹಿತಿ ಪಡೆಯಲು ಕಛೇರಿಗೆ ಬರುತ್ತಿದ್ದಾರೆ.
ಜಾಲತಾಣದ ಕುರಿತಾದ ಮಾಹಿತಿಯೇ ನಾಗರೀಕರಿಕರಿಗೆ ಇಲ್ಲವಾಗಿದೆ. ಆದ್ದರಿಂದ ಇ-ಆಡಳಿತ ಕೇಂದ್ರವು ಜಾಲತಾಣ ಯೋಜನೆಯ ಬಗ್ಗೆ ಹೆಚ್ಚು ಹೆಚ್ಚು ದೃಶ್ಯ ಮಾಧ್ಯಮ/ಪತ್ರಿಕೆಗಳಲ್ಲಿ ಪ್ರಚಾರ ಮಾಡಬೇಕು. ಇಲಾಖೆಗಳು ಸಹ ತಮ್ಮ ಇಲಾಖೆಯ ಎಲ್ಲಾ ಯೋಜನೆಗಳ ಜಾಹಿರಾತುಗಳಲ್ಲಿ ,ಕಚೇರಿಯ ನಾಮಫಲಕ, ಸೂಚನಾ ಫಲಕ ನಾಗರೀಕರು ಓಡಾಡುವ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ಜಾಲತಾಣದ ಕುರಿತಾಗಿ ಪ್ರಚಾರ ಮಾಡಬೇಕು. ಆಗ ಜಾಲತಾಣಗಳು ಹೆಚ್ಚು ಬಳಕೆಗೆ ಒಳಪಡುತ್ತದೆ. ನಾಗರೀಕರ ಕಛೇರಿ ಅಲೆದಾಟವು ಸಹ ಕಡಿಮೆಯಾಗುತ್ತದೆ.
ಮಾಹಿತಿ ಹಕ್ಕು ಕಾಯ್ದೆ ಯಡಿ ಸಲ್ಲಿಸಲಾಗುವ ಅರ್ಜಿಗಳ ಸಂಖ್ಯೆ ಕಡಿಮೆಯಾಗಿ ಅರ್ಜಿ ವಿಲೇವಾರಿ ಕೆಲಸಗಳು ಸ್ವಲ್ಪಮಟ್ಟಿಗಾದರೂ ಕಡಿಮೆ ಮಾಡಬಹುದು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಯೋಚಿಸಬೇಕಾಗಿದೆ.
ಸರ್ಕಾರದ ಸಾವಿರಾರು ಜಾಲತಾಣಗಳು ಇನ್ನೂ ಸಹ ಖಾಸಗಿ ಕಂಪನಿಗಳ ಹಿಡಿತದಲ್ಲಿದೆ. ಕೂಡಲೇ ಜಾಲತಾಣಗಳನ್ನು ಇ-ಆಡಳಿತ ಕೇಂದ್ರವು ಸಿದ್ದಪಡಿಸಿರುವ ನೂತನ ಮಾದರಿಯಲ್ಲಿ ಸರ್ಕಾರವೇ ನಿರ್ವಹಿಸುವಂತಾಗಬೇಕು. ಆ ಮೂಲಕ ಜಾಲತಾಣಗಳ ನಿರ್ವಹಣೆಗಾಗಿ ಸರ್ಕಾರವು ಖಾಸಗಿ ಕಂಪನಿಗಳಿಗೆ ನೀಡುತ್ತಿರುವ ಹಣವನ್ನು ಉಳಿತಾಯ ಮಾಡಬಹುದಾಗಿದೆ.
ಇ-ಆಡಳಿತ ಕೇಂದ್ರವು ತನ್ನ ಸಾಮರ್ಥ್ಯ ಸಂಘಟನೆ ಯೋಜನೆಯ ಮೂಲಕ ಶಾಲಾ ಕಾಲೇಜುಗಳಲ್ಲಿ ಕಾರ್ಯಾಗಾರವನ್ನು ಆಯೋಜಿಸಬೇಕು. ಆ ಮೂಲಕ ಸರ್ಕಾರದ ಜಾಲತಾಣವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಬೇಕಾದ ಅಗತ್ಯತೆ ಇದೆ.
ಕೆಲವು ಜಾಲತಾಣಗಳನ್ನು ಮಾಹಿತಿಗಾಗಿ ನೀಡಲಾಗಿದೆ.
https://karnataka.gov.in/ ಕರ್ನಾಟಕ ಸರ್ಕಾರದ ಅಧಿಕೃತ ಜಾಲತಾಣ
https://finance.karnataka.gov.in/ ಹಣಕಾಸು ಇಲಾಖೆ
https://kbjnl.karnataka.gov.in/english ಕೃಷ್ಣ ಭಾಗ್ಯ ಜಲ ನಿಗಮ
https://covid19.karnataka.gov.in/ ಕೋವಿಡ್ ೧೯ ಅಧಿಕೃತ ಜಾಲತಾಣ
https://igr.karnataka.gov.in/ ನೋಂದಣಿ ಮತ್ತು ಮುದ್ರಾಂಕ ಇಲಾಖೆ
https://mysurucitypolice.karnataka.gov.in/ ಮೈಸೂರು ಸಿಟಿ ಪೋಲೀಸ್
https://ksrtc.karnataka.gov.in/ ಕೆ.ಎಸ್ಆರ್.ಟಿ.ಸಿ
https://kpwd.karnataka.gov.in/ ಲೋಕೋಪಯೋಗಿ ಇಲಾಖೆ
https://aciwrm.karnataka.gov.in/ ಸಮಗ್ರ ಜಲಸಂಪನ್ಮೂಲ ನಿರ್ವಹಣಾ ಉನ್ನತ ಕೇಂದ್ರ
https://agriculture.karnataka.gov.in/ ಕೃಷಿ ಸಚಿವಾಲಯ
https://bcwd.karnataka.gov.in/ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
https://egovernance.karnataka.gov.in/ ಇ-ಆಡಳಿತ ಕೇಂದ್ರ ಬೆಂಗಳೂರು
https://ahf.karnataka.gov.in/ ಪಶು ಸಂಗೋಪನೆ ಮತ್ತು ಮೀನುಗಾರಿಕಾ ಇಲಾಖೆ
https://dce.karnataka.gov.in/ ಕಾಲೇಜು ಶಿಕ್ಷಣ ಇಲಾಖೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ