ನಮ್ಮ(ಇ) ಕನ್ನಡ

 

ನಮ್ಮ (ಇ) ಕನ್ನಡ

ಭಾಷೆ ಸಂವಹನದ ಮಾಧ್ಯಮವಾಗಿ ಆಡಳಿತ, ವ್ಯವಹಾರಗಳಲ್ಲಿ ಹೆಚ್ಚು ಹೆಚ್ಚು ಬಳಕೆಯಾಗುತ್ತಿರಬೇಕು. ಭಾಷೆ ಜಗತ್ತಿನಲ್ಲಿ ಎಲ್ಲಾ ಬದಲಾದ ವಿದ್ಯಮಾನಗಳಿಗೆ ತಕ್ಕಕ್ಕೆ ಬೆಳೆಯುತ್ತಾ ಮತ್ತು ಹೊಂದಿಕೊಳ್ಳುತ್ತ ಹೋಗಬೇಕು. ಯಾವ ಭಾಷೆ ಹೊಂದಿಕೊಳ್ಳಲು ಸಾಧ್ಯವಾಗುವುದಿಲ್ಲವೂ ಆ ಭಾಷೆ ನಶಿಸಿಹೋಗುವ ಸಾಧ್ಯತೆ ಇರುತ್ತದೆ. ವಿದ್ಯುನ್ಮಾನದ ಈ ಯುಗಮಾನದಲ್ಲಿ ಕನ್ನಡವೂ ಸೇರಿದಂತೆ ಜಗತ್ತಿನ ಸಾವಿರಾರು ಭಾಷೆಯಗಳು ಆತಂಕದಲ್ಲಿದೆ.

       ಈ ವಿದ್ಯುನ್ಮಾನ ಯುಗಕ್ಕೆ  ಕನ್ನಡ ಭಾಷೆಯನ್ನು ಹೊಂದಿಸುವ ಕೆಲಸ ನಿರಂತರವಾಗಿ ಆಗಬೇಕಾಗಿದೆ. ಗಣಕಗಳಲ್ಲಿ ಕನ್ನಡ ಬಳಕೆ ಸಾಧ್ಯವಾಗಿದೆಯಾದರೂ ಸಾಗಬೇಕಾದ ಹಾದಿ ಬಹಳಷ್ಟಿದೆ. ಕನ್ನಡವೂ ಸೇರಿದಂತೆ ಜಗತ್ತಿನಲ್ಲಿ ಭಾಷೆಗಳು ಉಳಿಯಬೇಕಾದರೆ ಅದನ್ನು ಗಣಕಯಂತ್ರಗಳಿಗೆ  ಹೊಂದಿಸುವುದು ಇಂದಿನ  ಅವಶ್ಯಕತೆಯಾಗಿದೆ.

        ಆಡಳಿತದಲ್ಲಿ ಕನ್ನಡವನ್ನು ಕಡ್ಡಾಯಗೊಳಿಸುವುದರ ಜೋತೆಗೆ  ಕನ್ನಡ ಭಾಷೆಯನ್ನು ಗಣಕಗಳಿಗೆ ಹೊಂದಿಸುವ ಕೆಲಸವನ್ನುಸಹ ಮಾಡಬೇಕಾಗಿದೆ. ಈ ಹಿನ್ನಲೆಯಲ್ಲಿ ತಂತ್ರಜ್ಞೃರು ಮತ್ತು ಭಾಷ ತಜ್ಞರು, ಜೋತೆ ಜೋತೆಯಾಗಿ ಕೆಲಸ ಮಾಡಬೇಕಾಗಿದೆ.

         ಇ-ಆಡಳಿತ ಕೇಂದ್ರ ಬೆಂಗಳೂರು ರವರು ಈ ಕಾರಣಕ್ಕಾಗಿಯೇ ಇ-ಕನ್ನಡ ಯೋಜನಾ ಘಟಕವನ್ನು ಸ್ಥಾಪಿಸಿ ಆ ಮೂಲಕ ಕನ್ನಡ ಭಾಷೆಯ ಕುರಿತಾಗಿ ಬಿಡಿ ಬಿಡಿಯಾಗಿ ನಡೆಯುತ್ತಿದ್ದ ತಂತ್ರಜ್ಞಾನದ ಕೆಲಸವನ್ನು ಒಂದೇ ವೇದಿಕೆಯಲ್ಲಿ ನಿರ್ವಹಣೆ ಮಾಡುವ ಕೆಲಸ ಮಾಡುತ್ತಿದೆ.

ಇ-ಕಲಿಕಾ ಕನ್ನಡ ಅಕಾಡೆಮಿ ಪೋರ್ಟಲ್‌ (https://ekannada.karnataka.gov.in)

        ಇಂದು ಭಾಷೆ  ರಾಜ್ಯ ,ದೇಶ, ಎಂಬ ಗಡಿಗಳ ಸೀಮೆಯನ್ನು ಮೀರಿದೆ. ಹಾಗೂ ಇಂದಿನ ವೇಗದ ಪ್ರಪಂಚಲ್ಲಿ ಸಾಂಪ್ರದಾಯಿಕ ತರಗತಿಗಳಲ್ಲಿ ಕುಳಿತು ಕಲಿಯಲು ಸಮಯದ ಅಭಾವವಿದೆ. ಈ ಹಿನ್ನಲೆಯಲ್ಲಿ ಇ-ಆಡಳಿತ ಕೇಂದ್ರ ಬೆಂಗಳೂರು ರವರು ಉನ್ನತ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ರಾಜ್ಯ , ದೇಶದ ಗಡಿಯಾಚೆಗೂ  ಕನ್ನಡ ಭಾಷೆಯನ್ನು ಕಲಿಯಲು ಆಸಕ್ತಿ ಇರುವ ಎಲ್ಲರಿಗೂ  ಕನ್ನಡ ಕಲಿಸುವ ಹಾಗೂ ಮೂಖ್ಯವಾಗಿ ಕನ್ನಡ ಭಾಷೆಯಲ್ಲಿ ವಿಜ್ಞಾನ/ ತಂತ್ರಜ್ಞಾನ/ ಗಳನ್ನೂ ಕಲಿಸಲು ಬೇಕಾದ ಅಗತ್ಯ ಪಠ್ಯಗಳನ್ನು ಮತ್ತು ತಂತ್ರಾಂಶವನ್ನು ನಿರ್ಮಾಣ ಮಾಡಲು ಇ-ಕಲಿಕಾ ಕನ್ನಡ ಅಕಾಡೆಮಿ ಪೋರ್ಟಲ್‌  ಸ್ಥಾಪಿಸಿದೆ.

ಪದ ಕಣಜ : ಇದೊಂದು ಮಹತ್ವಪೂರ್ಣ ಯೋಜನೆಯಾಗಿದೆ. ವಿದ್ಯುನ್ಮಾನದ ಈ ಯುಗದಲ್ಲಿ ಪದಗಳ ಅರ್ಥವನ್ನು ಪದಕೋಶಗಳಲ್ಲಿ ಹುಡುಕುವ ಬದಲು ಕನ್ನಡ ಭಾಷೆಗೆ ಸಂಬಂಧಿಸಿದ ಎಲ್ಲಾ ಪದಕೋಶಗಳನ್ನು ಒಂದೇ ವೇದಿಕೆಯಲ್ಲಿ ನೀಡುವ ಮಹತ್ವದ  ಕಾರ್ಯಕ್ರಮವೇ ಪದ ಕಣಜ.(https://ekannada.karnataka.gov.in)

ದೇಸೀಕರಣ

          ಕನ್ನಡ ಭಾಷೆ ತನ್ನೋಡಲಲ್ಲಿ ಹಲವಾರು ಭಾಷೆಯ ಪದಗಳನ್ನು ವೀಲಿನ ಮಾಡಿಕೊಂಡಿದೆ. ಇದು ದೀರ್ಘಕಾಲದಲ್ಲಿ ಭಾಷೆಯ ಉಳಿವಿನ ದೃಷಿಯಿಂದ ಒಳ್ಳೇಯ ಬೆಳವಣಿಗೆಯಾಗಲಾರದು. ಹೀಗಾಗಿ ಕನ್ನಡ ಭಾಷೆಯಲ್ಲಿಯೂ ಹೊಸ ಹೊಸ ಪದಗಳ ಅನ್ವೇಷಣೆಯಾಗಬೇಕು. ಕನ್ನಡ ಪದಗಳನ್ನು ಸೃಜಿಸುವ ಮೂಲಕ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುವ ಆ ನಿಟ್ಟಿನಲ್ಲಿ ದೇಸೀಕರಣ ಕಾರ್ಯಕ್ರಮ ಬಹಳ ಮುಖ್ಯವಾಗುತ್ತದೆ.

ಇ-ಆಡಳಿತ ಪದರಚನಾ ಸಮಿತಿ

ಕೈ ಬರಹದ ಮೂಲಕ ಕಡತಗಳನ್ನು ನಿರ್ವಹಿಸುತ್ತಿದ್ದ ಕಾಲ ಮುಗಿದು ದಶಕಗಳೇ ಕಳೆದು ಹೋಗಿದೆ. ಗಣಕ ಯಂತ್ರಗಳಿಲ್ಲದೇ ಆಡಳಿತ ನಡೆಸುವುದು ಸಾಧ್ಯವೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಗಣಕಗಳಲ್ಲಿ ಕನ್ನಡ ಬಳಕೆ ಮಾಡಲು   ಕನ್ನಡವನ್ನು ಹೆಚ್ಚು ಸಮರ್ಪಕವಾಗಿ  ಅಳವಡಿಸಬೇಕಾದಲ್ಲಿ ಇ-ಆಡಳಿತಕ್ಕೆ ಪೂರಕವಾಗಿ ಕನ್ನಡ ಪದಗಳ ರಚನೆಯಾಗಬೇಕು. ಹೀಗಾಗಿ ತಂತ್ರಜ್ಞರು/ ಭಾಷಾ ತಜ್ಞರನ್ನು ಒಳಗೊಂಡ ಇ-ಆಡಳಿತ ಪದ ರಚನಾ ಸಮಿತಿಯನ್ನು ರಚಿಸಿ ಇ-ಆಡಳಿತಕ್ಕೆ ಬೇಕಾದ ಅಗತ್ಯ ಪದ ರಚನೆಯಲ್ಲಿ ತೊಡಗಿದೆ.

ಮಾನದಂಡಗಳು

ಕನ್ನಡ ಭಾಷೆಯಲ್ಲಿ ನಿರ್ಮಾಣವಾಗುವ ಎಲ್ಲಾ  ತಂತ್ರಾಂಶಗಳು ಮತ್ತು ಜಾಲತಾಣಗಳಲ್ಲಿ ಕಡ್ಡಾಯವಾಗಿ ಕೆಲವು ಅಂಶಗಳನ್ನು ಅಳವಡಿಕೊಳ್ಳುವಂತೆ  ಮಾನದಂಡಗಳನ್ನು ಸೃಜಿಸಲಾಗಿದೆ. ಇದರಿಂದ ಭಾಷೆಯ ಬೆಳವಣಿಗೆ ಮತ್ತು ಏಕರೂಪತೆ ಸಾಧ್ಯವಾಗುತ್ತದೆ.

ಇಷ್ಟೇ ಅಲ್ಲದೇ ಕನ್ನಡ ಭಾಷೆಗೆ ಸಂಬಂಧಿಸಿದಂತೆ ಅಕ್ಷರ ವಿನ್ಯಾಸಗಳು, ಓಸಿಆರ್‌ ತಂತ್ರಾಂಶ, ಅನುವಾದದ ತಂತ್ರಾಂಶಗಳು, ಇ- ಪುಸ್ತಕಗಳು, ಕನ್ನಡ ಪಠ್ಯಗಳ ಡಿಜಿಟಲಿಕರಣ ಹೀಗೆ ಹಲವಾರು ತಂತ್ರಾಂಶಗಳು ವಿದ್ಯುನ್ಮಾನದ ಈ ಯುಗದಲ್ಲಿ ಕನ್ನಡ ಭಾಷೆಯ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಈ ಕಾರ್ಯಕ್ಕೆ ಸರ್ಕಾರ ಮಾತ್ರವಲ್ಲದೇ ಸರ್ಕಾರೇತರ ಸಂಸ್ಥೆಗಳು ಹಾಗೂ ಕನ್ನಡ ಭಾಷೆಯ ಕುರಿತಾಗಿ ಆಸಕ್ತಿ ಹೊಂದಿರುವ ತಂತ್ರಜ್ಞರು ಒಟ್ಟಾಗಿ ಶ್ರದ್ದಾಪೂರ್ವಕವಾಗಿ ಕೆಲಸ ಮಾಡಬೇಕಿದೆ.

ಸಧ್ಯ ಕನ್ನಡ ಭಾಷೆಯು ತಂತ್ರಜ್ಞನಕ್ಕೆ ಹೊಂದಿಕೊಳ್ಳುವಲ್ಲಿ ಆಶಾದಾಯಕವಾಗಿದೆ. ಜಗತ್ತಿನ ದೈತ್ಯ ಬಹು ರಾಷ್ಟ್ರೀಯ ಕಂಪನಿಗಳಾದ ಗೂಗಲ್/ ಅಮೆಜಾನ್/ಓಲಾ ದಂತಹ ಕಂಪನಿಗಳು ಸಹ ವ್ಯವಹಾರದಲ್ಲಿ ಕನ್ನಡ ಭಾಷೆಯನ್ನು ಬಳಸಿ ಸೇವೆ ನೀಡುತ್ತಿವೆ. ಹೀಗಾಗಿ ಮೊದಲು ಕನ್ನಡಿಗರಾದ ನಾವು ಕನ್ನಡವನ್ನು ಹೆಚ್ಚು ಹೆಚ್ಚು ಬಳಕೆ ಮಾಡಿದರೇ ಕನ್ನಡ ಭಾಷೆಯ ಬೆಳವಣಿಗೆಗೆ ಹೆಚ್ಚು ಸಹಕಾರಿಯಾಗುತ್ತದೆ.

ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ.

  ಕುವೆಂಪು

 

ವಿಶ್ವಾಸದಿಂದ

ಟಿ.ಎಂ.ರಾಮಪ್ರಸಾದ್‌

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಠ್ಯ ಪರಿಷ್ಕರಣೆ : ಒಂದು ದೃಷ್ಠಿಕೋನ

ಅನೀಶ್ ನಿನ್ನಂತಹವರೇ ನಮ್ಮ ಕನ್ನಡ ಮತ್ತು ಕರ್ನಾಟಕದ ನಿಜವಾದ ಆಸ್ತಿ . . . . .

ಯುಗಾದಿ ಬಂತೆಂದರೇ “ತಾತ” ನ ನೆನಪು ಕಾಡುತ್ತದೆ.