ಅಪ್ಪನಿಗೀಗಾ 78 . . . . .

 ಅಪ್ಪನಿಗೀಗಾ 78 . . . . .


ಅಪ್ಪ ನಿಮಗೆ ಈಗ 78 ವರ್ಷ (3-4-2025)  ನಾನು ಕಂಡಂತೆ  ನೀವು ವಿಶ್ರಾಂತಿ ಅಂತ ಪಡೆದದ್ದು ನೆನಪಿಲ್ಲ. ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿ 20 ವರ್ಷ ಗಳು ಕಳೆದಿದೆ .  ನಿಮ್ಮ ನಿವೃತ್ತಿಯ ನಂತರ ನಾವೇಲ್ಲರು ಮೈಸೂರಿಗೆ ಬಂದು ನೆಲೆಸಬೇಕಾಗಿ ಬಂತು, ತಗಡೂರಿನಲ್ಲಿ ಶಿಕ್ಷಕ ವೃತ್ತಿಯ ಜೊತೆಗೆ ಅಂಗಡಿ ವ್ಯಾಪಾರ ಮಾಡುತ್ತ ನಮ್ಮೇಲ್ಲರ ಬದುಕನ್ನು ಕಟ್ಟಿದ್ದೀರಿ , ವೃತ್ತಿಯಲ್ಲಿರುವಾಗಲೇ ಅಕ್ಕನ ಮದುವೆ ಮಾಡಿದ್ದೀರಿ ಅವಳಿಗೀಗಾ 18 ವರ್ಷದ ಮಗಳಿದ್ದಾಳೆ.


ನಿವೃತ್ತಿಯ ನಂತರ ಮೈಸೂರಿಗೆ ಬಂದು ಬ್ರಾಹ್ಮಣ ಧರ್ಮ ಸಹಾಯ ಸಭಾ ದಲ್ಲಿ ಕೆಲಸಕ್ಕೆ ಸೇರಿ . ಸುದೀರ್ಘ 18 ವರ್ಷ ಗಳು ಅಲ್ಲಿ ಸೇವೆ ಸಲ್ಲಿಸಿ, ನಂತರ ಅಲ್ಲಿಂದ ನಿವೃತ್ತರಾಗಿದ್ದೀರಿ. ತಗಡೂರಿನ ತಾತನ ಸೂರಿಗೆ ಆರ್ ಸಿ ಸಿ ಹಾಕಿಸಿ ತಗಡೂರಿನ ನಂಟು ಉಳಿಯುವಂತೆ ಮಾಡಿಕೊಟ್ಟಿದ್ದೀರಿ.  ನೀವು ಬದುಕಿನಲ್ಲಿ ಅನುಭವಿಸಿ ಕಷ್ಟ ಕಾರ್ಪಣ್ಯಗಳನ್ನು ಹತ್ತಿರದಿಂದ ನಾನು ನೋಡಿದ್ದೇನೆ.  ಆ ಎಲ್ಲಾ ಕಷ್ಟಗಳನ್ನು ನೀವು ನಿಭಾಯಿಸಿದ್ದು “ದುಡಿಮೆ” ಎಂಬ ಮಂತ್ರದಿಂದ ಎಂಬುದನ್ನು ನಾನು ಅರಿತಿದ್ದೇನೆ.    


ಹೆಂಡತಿ, ಮಗ, ಮಗಳು ಅಳಿಯ,  ಸೊಸೆ,  ಮುದ್ದಾದ 3 ಮೊಮ್ಮಕ್ಕಳೋಂದಿಗೆ  78  ವಸಂತಗಳ ಪರಿಪೂರ್ಣ ಬದುಕು ನಿಮ್ಮದು. ಚಿನ್ನಮ್ಮ ನ ಮಗನಾದ ಕಾರಣ ನಿಮ್ಮನ್ನು “ಚಿನ್ನಮರಿ” ಎಂದು ಎಲ್ಲರೂ ಕರೆಯುತ್ತಾರೆ. ನಾನು “ಚಿನ್ನಮರಿ”ಯ ಮಗ ಎಂಬುದಕ್ಕೆ ಹೆಮ್ಮೆ ಪಡುತ್ತೇನೆ.


ಸಾವಿರಾರು ನುಡಿಮುತ್ತುಗಳನ್ನು ಸಂಗ್ರಹ ಮಾಡಿದ್ದೀರಿ. ನಿಮ್ಮ ಅಂದದ ಕೈಬರಹಕ್ಕೆ ನೀವೇ ಸಾಟಿ. ನಿಮ್ಮ ಅಂದದ ಕೈ ಬರಹದ ನುಡಿಮುತ್ತುಗಳಿಗೆ ಅಭಿಮಾನಿ ಬಳಗವೇ ಸೃಷ್ಟಿಯಾಗಿದೆ.


ಮನೆಯಲ್ಲಿ ಒಂದು ಆನೆ (ಆರೋಗ್ಯ , ನೆಮ್ಮದಿ) ಸಾಕಿದ್ದೀನಿ ಎಂದು ನೀವು ಹೇಳುವಾಗ ನಿಜಕ್ಕೂ ನನಗೆ ಖುಷಿಯಾಗುತ್ತೆ . ಆ “ಆನೆ” ಯಾವಾಗಲು ನಿಮ್ಮ ಜೊತೆಗೆ ಇರಲಿ.  ಇದನ್ನೇ ನಾನು ಭಗವಂತನಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ.  ಹುಟ್ಟುಹಬ್ಬದ ಶುಭಾಶಯಗಳು ಅಪ್ಪ  . . . . . 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಠ್ಯ ಪರಿಷ್ಕರಣೆ : ಒಂದು ದೃಷ್ಠಿಕೋನ

ಅನೀಶ್ ನಿನ್ನಂತಹವರೇ ನಮ್ಮ ಕನ್ನಡ ಮತ್ತು ಕರ್ನಾಟಕದ ನಿಜವಾದ ಆಸ್ತಿ . . . . .

ಯುಗಾದಿ ಬಂತೆಂದರೇ “ತಾತ” ನ ನೆನಪು ಕಾಡುತ್ತದೆ.