ಯುಗಾದಿ ಬಂತೆಂದರೇ “ತಾತ” ನ ನೆನಪು ಕಾಡುತ್ತದೆ.
ಯುಗಾದಿ ಬಂತೆಂದರೇ “ತಾತ” ನ ನೆನಪು ಕಾಡುತ್ತದೆ.
ನನ್ನ ತಾತ ಅಳಗಂಚಿ ಶಾನಭೋಗರಾಗಿದ್ದರು ತಗಡೂರು ಅವರ ಕರ್ಮಭೂಮಿ , ನನ್ನನ್ನೂ ಕಂಡರೆ ಉಳಿದ ಮೊಮ್ಮಕ್ಕಳಿಗಿಂತ ತುಸು ಹೆಚ್ಚೇ ಪ್ರೀತಿ ಇತ್ತು ಅದಕ್ಕೆ ಮುಖ್ಯ ಕಾರಣ ಉಳಿದ ಎಲ್ಲಾ ಮೊಮಕ್ಕಳಿಗಿಂತ ತಾತನೋಂದಿಗೆ ಹೆಚ್ಚು ಕಾಲ ಕಳೆದದ್ದು ನಾನೇ ಹೀಗಾಗಿ ಸ್ವಲ್ಪ ಹೆಚ್ಚೇ ಪ್ರೀತಿ ಇತ್ತು ಜೊತೆಗೆ ಹೆಚ್ಚು ಏಟುಗಳನ್ನು ತಿಂದವನು ಕೂಡ ನಾನೇ. ತಾತ ನನ್ನನ್ನೂ ಸ್ಕೂಲಿಗೆ ಹೊಡೆದು ಕರೆದುಕೊಂಡು ಹೋಗ್ತಾ ಇದ್ದದ್ದು ಈಗಲೂ ನನಗೆ ನೆನಪಿದೆ.
ಯುಗಾದಿ ಬಂತೆದರೆ ತಾತಾ ನೆನಪಾಗುತ್ತಾರೆ. ಯುಗಾದಿಗೆ ಒಂದು ವಾರದ ಮುಂಚೆ ಕೆಂಪನನ್ನು ಕರೆದು ಕಟಿಂಗ್ ಮಾಡಿಸ್ತಾ ಇದ್ದರು . ಬಾಲು ಅಂಗಡಿಗೆ ಕರೆದುಕೊಂಡು ಹೋಗಿ ಹೊಸ ಬಟ್ಟೆ ಹೊಲಿಸ್ತಾಇದ್ದರು. ಒಂದು ಸಾರಿ ಬಾಲು ಯುಗಾದಿಗೆ ಬಟ್ಟೆ ಹೊಲಿದುಕೊಡಲಿಲ್ಲದ ಕಾರಣ ಯುಗಾದಿ ದಿನ ಪೂರ್ತಿ ನಾನು ಬಾಲು ಅಂಗಡಿಯಲ್ಲಿ ಕೂತು ಬಟ್ಟೆ ಹೊಲಿಸಿಕೊಂಡು ಸಂಜೆ ಮನೆಗೆ ಬಂದಿದ್ದೆ. ತಾತಾನ ನಿರ್ದೇಶನದಂತೆ ಅಪ್ಪ ಕೂಡ ಯುಗಾದಿಗೆ ನನಗೆ ತಪ್ಪದೆ ಹೊಸ ಬಟ್ಟೆ ಹೊಲಿಸ್ತಾ ಇದ್ದರು.
ತಾತಾ ಯುಗಾದಿಯನ್ನು ಗಂಡು ಮಕ್ಕಳ ಹಬ್ಬ ಎಂದು ಹೇಳಿತ್ತಿದ್ದರು “ ಪದ್ಮ ರಾಮುಗೆ ಎಣ್ಣೆ ನೀರು ಹಾಕಿ ಹೊಸ ಬಟ್ಟೆ ಹಾಕು” ಎಂದು ಯುಗಾದಿಯ ಬೆಳಗ್ಗೆ ತಾತಾ ನಿರ್ದೇಶನ ಹೊರಡಿಸುತ್ತಿದ್ದರು. ಯುಗಾದಿಯ ದಿನ ತಾತ ತುಂಬ ನೆನಪಾಗುತ್ತಾರೆ. ತಾತನ ನೆನಪಲ್ಲಿ ಹೊಸ ಬಟ್ಟೆ ತಕೋಬೇಕು …..
ತಾತಾ ಇರಬೇಕಿತ್ತು . . . . . .
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ