ನಾವುಗಳೇಲ್ಲ ಹೀಗೋ ಇದ್ವೀ ಅಲ್ವ!

 ನಾವುಗಳೇಲ್ಲ ಹೀಗೋ ಇದ್ವೀ ಅಲ್ವ!

ಸುಮಾರು 80 ದಶಕದಲ್ಲಿ ಹುಟ್ಟಿರುವ ಈಗ ಬದುಕಿನ ನಾಲ್ಲನೇ ದಶಕದಲ್ಲಿ ಜೀವನ ಸವೆಸುತ್ತಿರುವ ನಮಗೆ ಬುಧುವಾರದ “ಚಿತ್ರಹಾರ್” , ಶುಕ್ರವಾರದ “ಚಿತ್ರ ಮಂಜರಿ” ಬಹುದೊಡ್ಡ ಮನೋರಂಜನೆಯಾಗಿತ್ತು. ಹಿಂದಿ ಭಾಷೆ ಅರ್ಥವಾಗದೇ ಇದ್ದರೂ ಚಿತ್ರಹಾರ್ ತಪ್ಪದೇ ನೋಡುತ್ತಿದ್ವಿ. ಊರಿನ ಕೆಲವೇ ಮನೆಗಳಲ್ಲಿ ಟಿ ವಿ ಇತ್ತು ಅದರಲ್ಲಿ ನಮ್ಮ ಮನೆಯೋ ಒಂದು. ಕ್ರೋನ್ ಹೆಸರಿನ ಸುಮಾರು 1.1/2 ಅಡಿ ಅಗಲ , 3.1/2 ಉದ್ದ , 2 ಅಡಿ ಎತ್ತರದ ಬೃಹಾದಕಾರದ ಪುಟ್ಟ ಸ್ಕೀನ್ ಇರುವ ಅದಕ್ಕೆ ರಕ್ಷಣೆಗೆಂದು ರೂಲಿಂಗ್ ಗೇಟ್ ಮಾದರಿಯ ಬಾಗಿಲಿದ್ದ ಟಿ.ವಿ ನಮ್ಮ ಮನೆಯಲ್ಲಿತ್ತು. ಅದಕ್ಕೆ ಮುಗಿಲೆತ್ತರದ ಆಟೆನಾ ಇತ್ತು ಅದಕ್ಕೆ ಬೋಸ್ಟರ್ ಹೆಸರಿನ ಒಂದು ಉಪಕರಣ ಅದರಲ್ಲಿರುವ ಹಸಿರು ಲೈಟ್ ಆನ್ ಆಗುವ ವರೆವಿಗೂ ಆಟೆನಾ ತಿರುಗಿಸುತ್ತಾ ಟಿವಿ ನೋಡುತ್ತಿದ್ವಿ . ಆ ಟಿವಿ ನಾಗರಾಜು ದೊಡ್ಡಪ್ಪ ನಮ್ಮ ಮನೆಗೆ ತಂದಿದ್ದು ಅಂತ ನೆನಪು.
ರಾಮಾಯಣ ಮಹಾಭಾರತಗಳನ್ನು ನಾವು ಅರ್ಥೈಯಿಸಿಕೊಂಡಿದ್ದು ಇದೇ ಟಿವಿ ಯಲ್ಲಿ. ಮನೆ ತುಂಬ ಊರಿನ ಎಲ್ಲಾ ಜನರು ಕೂತು ರಾಮಯಣ ಮಹಾಭಾರತ ನೋಡ್ತಾ ಇದ್ದರು, ಅದು ಹಿಂದಿಯಲ್ಲಿ ಬರ್ತಾ ಇತ್ತು. ಅಲ್ಲಿ ಕುಳಿತಿರುವ ಯಾರಿಗೂ ಹಿಂದಿ ಬರ್ತಾ ಇರಲಿಲ್ಲಿ ಆದರೂ ಎಲ್ಲರೂ ತದೇಕ ಚಿತ್ತದಿಂದ ಟಿವಿ ನೋಡ್ತಾ ಇದ್ದರು. ಭಾನುವಾರದ ದಿನ ಸುರಭಿ ಅಂತ ಒಂದೇ ಒಂದು ಧಾರಾವಾಹಿ ಬರ್ತಾ ಇತ್ತು. ಬಿ.ಆರ್ ಛಾಯ ರವರ ದ್ವನಿಯಲ್ಲಿ “ಹೂವು ಅರಳುವವರು ಸೂರ್ಯನ ಕಡೆಗೆ “ ಎಲ್ಲಿ ಓಡುವಿರಿ ನಿಲ್ಲಿ ಮೋಡಗಳೇ ನಾಲ್ಕು ಹನಿಯ ಚೆಲ್ಲಿ” ಎಂಬ ಬಾವಗೀತೆಗಳು ಕನ್ನಡ ವಾಹಿನಿಯ ಕಡ್ಡಾಯ ಹಾಡುಗಳಾಗಿದ್ದವು. ಭಾನುವಾರದ ಚಲನಚಿತ್ರವಾಗಿ ನಾನು ಹೆಚ್ಚು ಬಾರಿ ನೋಡಿದ ಚಿತ್ರ “ಹೂ ಮಳೆ” ಇದೇ ಚಲನಚಿತ್ರವನ್ನು ಬಹುಶ: 100 ಕ್ಕೂ ಹೆಚ್ಚು ಬಾರಿ ಪ್ರಸಾರವಾಗಿರಬಹುದು. ಬಹಳ ಅಚ್ಚರಿಯ ವಿಷಯವೇನೇಂದರೇ ಭಾನುವಾರದ ಚಲನ ಚಿತ್ರ ಯಾವುದು ಎಂಬುದು ಆ ಕ್ಷಣದ ವರೆಗೂ ಯಾರಿಗೂ ತಿಳಿಯುತ್ತಿರಲಿಲ್ಲ. ಅದು ಆ ಕ್ಷಣದ ಬಹುದೊಡ್ಡ ಕುತೂಹಲದ ವಿಷಯವಾಗಿರುತ್ತಿತ್ತು . ದಿನಕಳೆದಂತೆ ನಮ್ಮ ಮನೆಯ ಕ್ರೋನ್ ಟಿ.ವಿ ಕೆಟ್ಟ ನಂತರ ಅದರಲ್ಲಿನ ಸ್ಕ್ರೀನ್ ತೆಗೆದು ನನ್ನ ಬಟ್ಟೆಗಳನ್ನು ಕೆಲವು ದಿನ ಇಟ್ಟುಕೊಂಡಿದ್ದೆ.
ತಗಡೂರಿನಲ್ಲಿ ಮುತ್ತಪ್ಪ ಎಂಬುವವರ ಟೆಂಟ್ ಇತ್ತು, "ನಮೋ ವೆಂಕಟೇಶ" ಹಾಡು ಹಾಕಿದರೆ ಊರಿಗೆಲ್ಲ ಕೇಳುತಿತ್ತು ಆಗ 6 ಗಂಟೆ ಆಯ್ತು ಅಂತ ಲೆಕ್ಕ ಸೈಕಲ್ ಟ್ರೈರ್ ಓಡೊಸ್ತಾ ಇದ್ದ ನಾವೇಲ್ಲ ಮನೆಗೆ ಓಡಿ ಹೋಗ್ತಾ ಇದ್ವಿ . ಟೆಂಟ್ ನಲ್ಲಿ ಫಿಲಂ ನೋಡೋಕೆ ಟಿಕೆಟ್ ದರ 2 ರೂಪಾಯಿ ನೆಲಕ್ಕೆ , 3 ರೂಪಾಯಿಗೆ ಬೆಂಚುಗೆ , 5 ರೂಪಾಯಿಗೆ ಟಿಕೆಟ್ ಚೇರ್ ಗೆ, ಹೀಗೆ ಆ ಟೆಂಟ್ ನಲ್ಲಿ ಬಬ್ರುವಾಹನ , ಭಕ್ತ ಪ್ರಹ್ಲಾದ , ರಾಮಾಚಾರಿ , ಮುತ್ತಣ್ಣ , ಹೀಗೆ ಹತ್ತಾರು ಫಿಲಂ ಗಳನ್ನು ನಾನು ನೋಡಿದ್ದೇನೆ. ಸ್ಕೂಲ್ ನಲ್ಲಿ ಪ್ರತಿ ವರ್ಷ ಇದೇ ಟೆಂಟ್ ನಲ್ಲಿ ಉಚಿತವಾಗಿ ಮಕ್ಕಳ ಸೈನ್ಯ ಅನ್ನೋ ಕನ್ನಡ ಫಿಲಂ ಅನ್ನು ತೋರಿಸ್ತಾ ಇದ್ದರೂ ಅದನ್ನು 4 ವರ್ಷ ನಾನು ನೋಡಿದಿನಿ .
ನಮ್ಮೋರಿನಲ್ಲೋಂದು “ಮಾರುತಿ ಭಕ್ತ ಮಂಡಳಿ” ಎಂಬ ಹೆಸರಿನ ಒಂದು ಗುಂಪಿತ್ತು ಅದರಲ್ಲಿ ವರ್ಷಕ್ಕೆ ಒಂದು ಸಾಮಾಜಿಕ ನಾಟಕ ಮಾಡುತ್ತಿದ್ದರು ನಮ್ಮಪ್ಪ ಕೂಡ ಹಲವು ನಾಟಕಗಳಲ್ಲಿ ಪಾತ್ರ ಮಾಡಿದ್ದರು . ಇಂದಿಗೂ “ಬಳ್ಳಿಬಾಡಿತು ಹೂವು ಅರಳಿತು” , “ಮಂಗಳ ನನ್ನ ಅತ್ತಿಗೆ” ನಾಟಕಗಳು ನನ್ನ ಕಣ್ಣುಂದಿದೆ. ಅದರಲ್ಲಿ ನಮ್ಮ ಗಾಯಿತ್ರಿ ಕೂಡ ಪಾತ್ರ ಮಾಡಿದ್ಲು .
ನಮ್ಮ ಸ್ಕೂಲ್ ದೀಪಕ್ ಕಾನ್ವೆಂಟ್ ಅಂತ 10 ಗಂಟೆ ಗೆ ಶುರುವಾಗ್ತಾ ಇತ್ತು ಸಂಜೆ 5.30 ಕ್ಕೆ ಮುಗಿತಾ ಇತ್ತು . ಮಧ್ಯಾಹ್ನ 1.30 ರಿಂದ 2.30 ರ ವರಗೆ ಊಟ. ಪ್ರತಿ ಶುಕ್ರವಾರ ಸಂಜೆ 4.30 ರಿಂದ 5.30 ರ ವರಗೆ ಸರಸ್ವತಿ ಪೂಜೆ ,ಸಾಂಸ್ಕೃತಿಕ ಕಾರ್ಯಕ್ರಮ ಇರುತಿತ್ತು. 7 ನೇ ಕ್ಲಾಸ್ ನ ತನಕವೂ ದೀಪಕ್ ಕಾನ್ವೆಂಟ್ ನನ್ನ ಸ್ಕೂಲ್ ಆಗಿತ್ತು. ದೀಪಕ್ ಕಾನ್ವೆಂಟ್ ನಲ್ಲಿ ಕೊ-ಎಜುಕೇಷನ್ ಇತ್ತು ಹುಡುಗ ಹುಡುಗಿ ಇಬ್ಬರು ಇರತ್ತಾ ಇದ್ವಿ ಗಲಾಟೆ ಮಾಡಿದವರಿಗೆ ಶ್ರೀಕಾಂತ ಮೇಷ್ಟು ಹುಡುಗಿರ ಕೈಲಿ ಮೂಗು ಹಿಡಿದು ಕಪಾಲಕ್ಕೆ ಹೋಡಿಸ್ತಾ ಇದ್ದರೂ ಅದು ಆ ಕಾಲದ ಬಹುದೊಡ್ಡ ಶಿಕ್ಷೆಯಾಗಿತ್ತು.
ನಂತರ ಜನತಾ ಫ್ರೌಢ ಶಾಲೆಯಲ್ಲಿ A.C.S ನಮ್ಮ ಹೆಡ್ ಮಾಸ್ಟರ್ ಆಗಿದ್ದರು (ಚೆಲುವರಾಯ ಸ್ವಾಮಿ : ಗಣಿತ), D.C.B (ಚನ್ನಬಸಪ್ಪ ನವರು: ವಿಜ್ಞಾನ), D.S.M ( ಮಹದೇಶ್ವರಯ್ಯ: ಸಮಾಜ ವಿಜ್ಞಾನ) , M.S.R. ( ರಂಗಸ್ವಾಮಿ ರವರು : ಇಂಗ್ಲೀಷ್) , G.R.C : (ಚಂದ್ರಪ್ಪ ಗೌಡ ರವರು ಕನ್ನಡ), H.R.N. (ನಿರಂಜನ್ ರವರು ಗಣಿತ), ಪಿ.ಟಿ ಮೇಷ್ಟು (ಬಿ.ಸಿ ಚಿನ್ನಸ್ವಾಮಿ), A.R.V (ವಿಜಯಲಕ್ಷ್ಮಿ ರವರು ಹಿಂದಿ) NCM : ನೈತಿಕಶಿಕ್ಷಣ (ಮಹದೇವಯ್ಯ) ಇವರೆಲ್ಲ ನಮ್ಮ ಮೆಷ್ಟು ಎಂದು ಹೇಳಿಕೊಳ್ಳೋದಕ್ಕೆ ಹೆಮ್ಮೆ ಅನ್ನಿಸತ್ತೆ.
ಅಂಬಿಕಾ ಮೇಡಂ ಮನೆಗೆ ಎಸ್ ಎಸ್ ಎಲ್ ಸಿ ಯಲ್ಲಿ ಟೂಷನ್ ಗೆ ಹೋಗ್ತಾ ಇದ್ವಿ ಅವರು ನಮ್ಮೋರಿನ ಸರಸ್ವತಿ ಅಂತ ಕರದೆರೆ ಅದು ಅತಿಶಯೋಕ್ತಿಯಾಗಲಾರದು. ನಮಗೆ ಟ್ಯೂಷನ್ ಹೇಳಿಕೊಡ್ತಾ ಇದ್ದರೂ ಬಹಳ ಒಳ್ಳೇ ಜನ ಅವರು ಆದರೆ ಅವರಿಗೆ ಒಳ್ಳೆ ಬದುಕನ್ನೆ ದೇವರು ಕರುಣಿಸಲಿಲ್ಲ. ಅವರ ಬಗ್ಗೆ ಇನೋಮ್ಮೆ ಸುದೀರ್ಘವಾಗಿ ಬರೆಯುತ್ತೇನೆ.
ಎಸ್ ಎಸ್ ಎಲ್ ಸಿ ಯಲ್ಲಿ ನಮ್ಮ ಊರಿನಿಂದ ದೇವನೂರಿಗೆ ಸೈಕಲ್ ನಲ್ಲಿ ಹೋಗಿ ಪರೀಕ್ಷೆ ಬರೆದು ಬರತ್ತಾ ಇದ್ವಿ ಅದು ನಮಗೆ ಸಂಭ್ರಮದ ವಿಷಯವಾಗಿತ್ತು. ನನಗೆ ಇನ್ನೂ ನೆನಪಿದೆ ಸಮಾಜ ಪರೀಕ್ಷೆ ಬರೆಯಲು ಹೋಗುವಾಗ ವರಹಳ್ಳಿ ಗೇಟ್ ಹತ್ತಿರ ಸೈಕಲ್ ಪಂಚರ್ ಆಗಿತ್ತು ಆಗ ನನ್ನ ಸ್ನೇಹಿತ ಕಿರುಗುಂದದ ರುದ್ರಸ್ವಾಮಿ ಸೈಕಲ್ ತಳ್ಳಿಕೊಂಡು ದೇವನೂರಿನವರೆಗೂ ಬಂದಿದ್ದ. ನಮ್ಮ ಪರೀಕ್ಷೆಗೆ ನಮ್ಮ ಅಪ್ಪ ಅಮ್ಮ ನಮ್ಮನ್ನು ಯಾವತ್ತು ಬಂದು ಪರೀಕ್ಷಾ ಕೇಂದ್ರಕ್ಕೆ ಬಿಟ್ಟು ಹೋದದ್ದು ಇಲ್ಲವೇ ಇಲ್ಲ. ಪರೀಕ್ಷೆ ಬರೆದು ಬಂದ ನಂತರ ಪರೀಕ್ಷೆ ಬರೆದ ನೆನಪು ನಮಗೆ ಇರುತ್ತಿರಲಿಲ್ಲಿ. ನಮ್ಮನ್ನು ಯಾರು ಎಷ್ಟು ಮಾರ್ಕ್ ಬಂತು? ಅಂತ ಕೇಳ್ತಾ ಇರಲಿಲ್ಲ . ಪಾಸೋ ಫೇಲೋ ಅಂತ ಕೇಳ್ತಾ ಇದ್ದರು ಅಷ್ಟೇ .
ನಮಗೆ ಯಾವತ್ತು ಪರೀಕ್ಷೆ ಭಯ ಅನ್ನಿಸಲೇ ಇಲ್ಲ . ಅಕ್ಟೋಬರ್ ಗೆ ಪೇಲಾದವರಿಗೆ ಅಂತಲೇ ಒಂದು ಪರೀಕ್ಷೆ ಮಾಡ್ತಾ ಇದ್ದರು ಅದರಲ್ಲಿ ಪಾಸ್ ಆದರೆ ಆಯ್ತು ಎಂಬ ಮಾನಸಿಕ ಸಿದ್ದತೆ ಅದ್ಯಾವ ಮೋಟಿವೇಷನಲ್ ಕ್ಲಾಸ್ ಯಿಂದ ನಮ್ಮಗಳ ಮನಸ್ಸಿಗೆ ಬಂದು ಸೇರಿತ್ತೋ ಗೋತ್ತಿಲ್ಲ.
ಇವತ್ತಿನ ನಮ್ಮ ನಮ್ಮ ಮಕ್ಕಳ ಬಾಲ್ಯವನ್ನು ನಮ್ಮ ಬಾಲ್ಯಕ್ಕೆ ಹೋಲಿಸಿಕೊಂಡು ಸುಮ್ಮನೆ ಒಮ್ಮೇ ನಕ್ಕು ಬಿಡೋಣ ಅಲ್ಲವೇ . . . .
ಏನಂತೀರಿ
1 ವ್ಯಕ್ತಿ, ಮಗು, ಬೀದಿ ಮತ್ತು ಪಠ್ಯ 'Picxy' ಹೇಳುತ್ತಿದೆ ನ ಚಿತ್ರವಾಗಿರಬಹುದು
ಎಲ್ಲಾ ಪ್ರತಿಕ್ರಿಯೆಗಳು:
Girish Chinnamballi, Shashidhar Hl ಮತ್ತು 4 ಇತರರು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಠ್ಯ ಪರಿಷ್ಕರಣೆ : ಒಂದು ದೃಷ್ಠಿಕೋನ

ಅನೀಶ್ ನಿನ್ನಂತಹವರೇ ನಮ್ಮ ಕನ್ನಡ ಮತ್ತು ಕರ್ನಾಟಕದ ನಿಜವಾದ ಆಸ್ತಿ . . . . .

ಯುಗಾದಿ ಬಂತೆಂದರೇ “ತಾತ” ನ ನೆನಪು ಕಾಡುತ್ತದೆ.