ಅನೀಶ್ ನಿನ್ನಂತಹವರೇ ನಮ್ಮ ಕನ್ನಡ ಮತ್ತು ಕರ್ನಾಟಕದ ನಿಜವಾದ ಆಸ್ತಿ . . . . .

 ಕಳೆದ ಶುಕ್ರವಾರ ಮೈಸೂರಿಗೆ ಹೊರಡಲು ಸಿದ್ದನಿರುವಾಗ ಗೆಳೆಯ ಲೋಕೇಶ್ Rapido ಬಳಕೆ ಮಾಡು ಬೇಗ ಮೈಸೂರು ಸ್ಯಾಟಿಲೈಟ್ ಬಸ್ ಸ್ಟಾಪ್ ತಲುಪುತ್ತಿಯಾ ಎಂದು ಸಲಹೆ ನೀಡಿದ . ಕೂಡಲೇ ಮೊಬೈಲ್ ನಲ್ಲಿ Rapido ಬುಕ್ ಮಾಡಿದೆ, ಕೆಲವೇ ನಿಮಿಷದಲ್ಲಿ  ಇಲ್ಲೆ ನಿಮ್ಮ ಮುಂದೆ ಕಾಣಿಸುತ್ತಾ ಇದೀನಾ ಹಾ ನಾನೇ ಎಂದು ಜೋರಾಗಿ ಕೂಗಿದ.


              ನೋಡಿದ ಕೂಡಲೇ ಗೊತ್ತಾಗಿದ್ದು ಆತ ಕರ್ನಾಟಕದವನಲ್ಲ , ಉತ್ತರ ಭಾರತದವನಂತೆ ಕಾಣಿಸಿದ . ಕನ್ನಡಿಗರೇ ನಾಚುವಂತೆ ಕನ್ನಡದಲ್ಲಿ ಮಾತನಾಡಿದ. ಸ್ಕೂಟರ್ ತುಂಬ ಹಳೆಯದಾಗಿತ್ತು ಮತ್ತೋಮ್ಮೆ ಸ್ಕೂಟರ್ ನಂಬರ್‌ ಕನ್ವರ್ಮ್‌ ಮಾಡಿಕೊಂಡು ಒಟಿಪಿ ಹೇಳಿದೆ ಕೂಡಲೇ ಆತ ಧನ್ಯವಾದಗಳು ಸರ್‌ ಹೆಲ್ಮಟ್ ಹಾಕಿಕೊಳ್ಳಿ ಸರ್‌ ಎಂದು ಹೇಳಿದ  ನಮ್ಮ ಸವಾರಿ ಪ್ರಾರಂಭವಾಯಿತು.

ಹಾಗೆ ಆತನನ್ನು ಮಾತಿಗೆಳೆದು ನಿಮ್ಮ ಹೆಸರು ಏನು ಎಂದು ಕೇಳಿದೆ ಸರ್‌ ಅನೀಶ್‌ ನಾನು ಯುಪಿ ಯವನು ಸರ್‌ ಇಲ್ಲೆ ಮಾನ್ಯತಾ ಟೆಕ್‌ ಪಾರ್ಕ್‌ ನಲ್ಲಿ ಸೆಕ್ಯೂರಿಟಿ ಕೆಲಸ ಮಾಡ್ತಾ ಇದೀನಿ ಸಹಕಾರ ನಗರದಲ್ಲಿ ರೂಂ ಮಾಡಿಕೊಂಡಿದ್ದೀನಿ ಸರ್‌ ಎಂದು ತನ್ನ ಸಂಕ್ಷಿಪ್ತ ಪರಿಚಯ  ಮಾಡಿಕೊಂಡ 


             ನೀವು ಯುಪಿ ಇಂದ ಏಕೆ ಇಲ್ಲಿ ಬಂದು ಕೆಲಸ ಮಾಡ್ತಾ ಇದ್ದೀರಿ ಎಂದು ಮರು ಪ್ರಶ್ನೆ ಕೇಳಿದೆ…. ಸರ್ ಯುಪಿ ಯಲ್ಲಿ ಕೆಲಸ ಸಿಗೋದಿಲ್ಲ ಸರ್‌ ಹೀಗಾಗಿ ನಾನು ಇಲ್ಲಿಗೆ ಬಂದಿದ್ದೀನಿ ಸಂಜೆ ಯಿಂದ ಬೆಳಗ್ಗೆ ವರೆಗೂ ಸೆಕ್ಯೂರಿಟಿ ಕೆಲಸ ಮಾಡ್ತಿನಿ ಬೆಳಗ್ಗೆ 11 ಗಂಟೆಯಿಂದ ಸಂಜೆ 6 ಗಂಟೆ ವರಗೂ Rapido ಓಡುಸ್ತೀನಿ ಸರ್ ತುಂಬ ಕೆಲಸ ಸಿಗತ್ತೇ ಸರ್‌ ಬೆಂಗಳೂರಿನಲ್ಲಿ ಎಂದು ಹೇಳಿದ.

 

                ಮುಂದಿನದ್ದು ನನ್ನ ಕಲ್ಪನೆಗೂ ಮೀರಿದ್ದು ಆತ ಬೆಂಗಳೂರಿಗೆ ಬಂದು ಕೇವಲ 4 ವರ್ಷವಾಗಿದೆ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿBCA ಪದವೀಧರ , ಬೆಂಗಳೂರಿನ ಗಲ್ಲಿ ಗಲ್ಲಿ ಓಡಾಡಿದ್ದಾನೆ. ಕೈತುಂಬ ಸಂಪಾದನೆ ಮಾಡುತ್ತೀನಿ ವರ್ಷ ಕ್ಕೆ 2 ತಿಂಗಳು ಊರಿಗೆ ಹೋಗಿ ತಂದೆ ತಾಯಿ ಯೊಂದಿಗೆ ಕಾಲ ಕಳೆದು ಬರುತ್ತಾನೆ. ಮುಂದಿನ ವರ್ಷ ಮದುವೆ ಯಾಗಿ ನನ್ನ ಹೆಂಡತಿ ಮತ್ತು ತಂದೆ ತಾಯಿಯನ್ನು ಬೆಂಗಳೂರಿಗೆ ಕರೆದುಕೊಂಡು ಬರ್ತೀನಿ ಅಂತ ಹೇಳಿದ. ಬೆಂಗಳೂರು ತುಂಬ ಚನ್ನಾಗಿದೆ ಸರ್ ದುಡಿದಷ್ಟು ಹಣ ಸಂಪಾದನೆ ಮಾಡಬಹದು ಎಂದು ಹೇಳಿದ. 


               ಸರ್‌ ನನ್ನೋಂದಿಗೆ ಯಾರು ಕನ್ನಡದಲ್ಲಿ ಮಾತನಾಡೋದೇ ಇಲ್ಲ ಸರ್‌ ಹೀಗಾಗಿ ನನಗೆ ಸರಿಯಾಗಿ ಕನ್ನಡ ಬರೋದಿಲ್ಲ ಎಂದು ಹೇಳಿದ. ನನಗೆ ತಕ್ಷಣಕ್ಕೆ ವಿದೇಶದಿಂದ ಬಂದ ನನ್ನ ಬಾಲ್ಯ ಸ್ನೇಹಿತರ ನೆನಪಾದರೂ ಯಾಕೆ ನೆನಪಾದರೂ ಅನ್ನೋದನ್ನು ನಿಧಾನವಾಗಿ ಹೇಳುತ್ತೀನಿ.


                ಇನ್ನೋಂದು ವಿಷಯ ಹೇಳಿ ಮಾತು ಮುಗಿಸುತ್ತೇನೆ. ಉತ್ತರ ಪ್ರದೇಶದ ಲಕ್ನೋ ದಿಂದ ಕೇವಲ 75 ಕಿಮೀ ಇರುವ ಒಂದು ಜಿಲ್ಲಾ ಕೇಂದ್ರ ದಿಂದ ಬಂದ ಅನೀಶ್‌ ಎರಡು ರಾಜ್ಯಗಳ ರಾಯಭಾರಿಯಾಗಿ ನನಗೆ ಕಾಣಿಸಿದೆ. ಕರ್ನಾಟಕದ ಬಗ್ಗೆ ಅತೀ ಹೆಮ್ಮೆಯಿಂದ ಮಾತನಾಡಿದ. ಲಕ್ನೋದ ಸ್ಥಿತಿಯ ಬಗ್ಗೆ ಆತನಲ್ಲಿ ನಿರಾಸೆಯು ಇತ್ತು.ಒಟ್ಟಾರೆ ಆತನ ಮಾತುಗಳಲ್ಲಿ ಬದುಕಬೇಕು ಎಂಬ ಹಟ ಕಾಣಿಸ್ತಾ ಇತ್ತು.  ಸ್ಯಾಟಿಲೈಟ್‌ ಬಸ್‌ ಸ್ಟಾಪ್‌ ಹತ್ತಿರ ಇಳಿಸಿದ ನಿನ್ನೋಂದಿಗೆ ಮಾತನಾಡಿ ತುಂಬ ಸಂತೋಷವಾಯಿತು ಎಂದು ಹೇಳಿ  ಒಂದು ಸೆಲ್ಪಿ ತೆಗೆದುಕೊಳ್ಳ ಬಹುದಾ ಎಂದು ಕೇಳಿದೆ ಸಂತೋಷದಿಂದ ಆಗಲಿ ಸರ್‌ ಎಂದ …  


ಅನೀಶ್ ನಿನ್ನಂತಹವರೇ ನಮ್ಮ ಕನ್ನಡ ಮತ್ತು ಕರ್ನಾಟಕದ ನಿಜವಾದ ಆಸ್ತಿ  . . . . .

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಠ್ಯ ಪರಿಷ್ಕರಣೆ : ಒಂದು ದೃಷ್ಠಿಕೋನ

ಯುಗಾದಿ ಬಂತೆಂದರೇ “ತಾತ” ನ ನೆನಪು ಕಾಡುತ್ತದೆ.