“ಕುಪ್ಪಳ್ಳಿ ಪುಟ್ಟಪ್ಪ ಪೂರ್ಣ ಚಂದ್ರ ತೇಜಸ್ವಿ “

 

“ಕುಪ್ಪಳ್ಳಿ ಪುಟ್ಟಪ್ಪ ಪೂರ್ಣ ಚಂದ್ರ ತೇಜಸ್ವಿ “

ಪ್ರಾಣಿ, ಪಕ್ಷಿ, ಮಲೆನಾಡು, ಕಾಫಿತೋಟ, ಒಟ್ಟಾರೆ ಕಾಡನ್ನುಇವರಷ್ಟು ಪ್ರೀತಿಸಿದವರು ಯಾರು ಇಲ್ಲ. ಸಣ್ಣ ಸಣ್ಣ ವಿಷಯಗಳಲ್ಲೂ  ಅದ್ಬುತಗಳನ್ನು ಕಂಡುಕೊಂಡು ಅದನ್ನು ಸಾಹಿತ್ಯದ ಮೂಲಕ ಜನಮಾನಸಕ್ಕೆ ಇಳಿಸಿದ ಅಪರೂಪದ ಸಾಹಿತಿ  ನೀವು.  ಬದುಕಿದ್ದರೇ ನಿಮಗೆ 87 ನೇ ವರ್ಷ ಇರುತ್ತಿತ್ತು , ಆದರೆ  ನೀವು ನಮ್ಮನ್ನು ಅಗಲಿ ಇಂದಿಗೆ 17 ವರ್ಷಗಳು ಕಳೆದು ಹೋಗಿದೆ (8-09-1938 ರಿಂದ 5-4-2007) . ಕನ್ನಡ  ಭಾಷೆಯ ಮತ್ತು ಕನ್ನಡಿಗರ  ಮೇಲೆ ನೀವು ತೋರಿದ ಪ್ರೀತಿ ಅಮ್ಮನಂತಹದು ಸರ್‌.  ಕಥೆಗಾರ , ಕಾದಂಬರಿಕಾರ, ಹೋರಾಟಗಾರರಾಗಿ ಇದ್ದ ನೀವು ಎಲ್ಲಾ ಪಾತ್ರಗಳಿಗೂ ನ್ಯಾಯ ಒದಗಿಸಿದ್ದೀರಿ. ನಿಮ್ಮನ್ನು  ನಿಮ್ಮ ಸಾಹಿತ್ಯ ಜಗತ್ತಿನಿಂದಲೇ ಕಂಡವನ್ನು ನಾನು. ಚಿಕ್ಕ ಮಂಗಳೂರು ಕಾಫೀ ತೋಟಗಳನ್ನು ನೋಡಿದಾಗ ನಿಮ್ಮ ನೆನೆಪು ಕಾಡದೇ ಇರದು . ಜೇನು ನೋಣಗಳನ್ನು ಕಂಡಾಗ ಅದರ ಸಿಹಿಗಿಂತ ನಿಮ್ಮ ಕಾರ್ವಾಲೋ ಕಾದಂಬರಿಯ ಸನ್ನಿವೇಶ ಒಮ್ಮೆ ಬಂದು ಹೋಗದೇ ಇರದು.  ಅಷ್ಟು ಅದ್ಬುತವಾದ ಬರಹ ನಿಮ್ಮದು .  ಹೊಸ ವಿಚಾರಗಳು ಎಂಬ ಪುಸ್ತಕದ ಎಲ್ಲಾ ಬರಹಗಳೂ ಸಹ ಇಂದಿಗೂ ಪ್ರಸ್ತುತವೆನಿಸುತ್ತಿವೆ ಅಂತಹ ದೂರದೃಷ್ಠಿ ಇರುವ ಸಾಹಿತಿಗಳು ನೀವು.  ನೀವು ಭೌತಿಕವಾಗಿ ನಮ್ಮೊಂದಿಗಿಲ್ಲದೇ ಇರಬಹುದು ಆದರೇ ನಿಮ್ಮ ಬರಹಗಳಿಂದ ಕೋಟ್ಯಾಂತರ ಮನಸ್ಸುಗಳಲ್ಲಿ ನೀವು ಶಾಶ್ವತವಾಗಿದ್ದೀರಿ. ವಯಸ್ಸಿನ ತಾರತಮ್ಯ ವಿಲ್ಲದೇ ಎಲ್ಲರಿಗೂ ಹತ್ತಿರವಾಗುವ ನೀವು ಶಾಶ್ವತವಾಗಿ ನಮ್ಮೊಂದಿಗೆ ಇರುತ್ತೀರಿ.  ಈ ದಿನ ನಿಮ್ಮ ಅಗಲಿಕೆ ನೆನೆದು ನೆನೆಪು ಕಾಡುತಿತ್ತು ಇದು ನಿಮಗೆ ನನ್ನ ನುಡಿ ನಮನ “ಪೂಚಂತೇ” ಸರ್ .  

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಠ್ಯ ಪರಿಷ್ಕರಣೆ : ಒಂದು ದೃಷ್ಠಿಕೋನ

ಅನೀಶ್ ನಿನ್ನಂತಹವರೇ ನಮ್ಮ ಕನ್ನಡ ಮತ್ತು ಕರ್ನಾಟಕದ ನಿಜವಾದ ಆಸ್ತಿ . . . . .

ಯುಗಾದಿ ಬಂತೆಂದರೇ “ತಾತ” ನ ನೆನಪು ಕಾಡುತ್ತದೆ.